Home ಅಪರಾಧ ಮೆಟ್ರೋ ಸ್ಟೇಷನ್ ನಲ್ಲಿ ಹುಟ್ಟುಹಬ್ಬ ಆಚರಣೆಗೆ ಯತ್ನ: ಖ್ಯಾತ ಯೂಟ್ಯೂಬರ್ ಗೌರವ್ ತನೇಜಾ ಸೆರೆ

ಮೆಟ್ರೋ ಸ್ಟೇಷನ್ ನಲ್ಲಿ ಹುಟ್ಟುಹಬ್ಬ ಆಚರಣೆಗೆ ಯತ್ನ: ಖ್ಯಾತ ಯೂಟ್ಯೂಬರ್ ಗೌರವ್ ತನೇಜಾ ಸೆರೆ

ನವದೆಹಲಿ: ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಖ್ಯಾತ ಯೂಟ್ಯೂಬರ್ ಗೌರವ್ ತನೇಜಾ ಅವರನ್ನು ನೋಯ್ಡಾ ಪೊಲೀಸರು ಬಂಧಿಸಿದ್ದಾರೆ.

ಸೆಕ್ಷನ್ 144ರಡಿ ನಿಷೇಧಾಜ್ಞೆ ಉಲ್ಲಂಘಿಸಿದ್ದಕ್ಕಾಗಿ ಅವರನ್ನು ಪೊಲೀಸರು ಬಂಧಿಸಿ, ಸೆಕ್ಷನ್ 188 ರ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಯೂಟ್ಯೂಬರ್ ಗೌರವ್ ತನೇಜಾ ಹುಟ್ಟುಹಬ್ಬವನ್ನು ಆಚರಿಸಲು ನೋಯ್ಡಾದ ಸೆಕ್ಟರ್ 51 ಮೆಟ್ರೋ ಸ್ಟೇಷನ್​ಗೆ ಬಂದಿದ್ದರು. ಈ ಮಾಹಿತಿಯನ್ನು ಪತ್ನಿ ರಿತು ತನೇಜಾ ಯೂಟ್ಯೂಬ್​ ಮೂಲಕ ಹಂಚಿಕೊಂಡಿದ್ದರು.

ಆದರೆ, ಗೌರವ್ ತನೇಜಾ ಬರುವ ಮುನ್ನವೇ ಮೆಟ್ರೋ ಸ್ಟೇಷನ್ ಬಳಿ ಅಭಿಮಾನಿಗಳು ಬಂದು ಸೇರಿದ್ದರು. ಅಲ್ಲದೇ, ಅಲ್ಲಿನ ಪರಿಸ್ಥಿತಿ ನೆರೆದಿದ್ದ ಜನರು ವಿಡಿಯೋ ಮಾಡಿ ವೈರಲ್ ಮಾಡಿದ್ದಾರೆ. ಜೊತೆಗೆ ಟ್ರಾಫಿಕ್​ ಜಾಮ್​ ಕೂಡಾ ಉಂಟಾಗಿದೆ.

ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಸ್ಥಳದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾದ ಹಿನ್ನೆಲೆಯಲ್ಲಿ ಹಾಗೂ ಅಲ್ಲಿ ಸೆಕ್ಷನ್ 144ರಡಿ ನಿಷೇಧಾಜ್ಞೆ ಜಾರಿ ಇದ್ದರೂ ಕೂಡ ಹೆಚ್ಚಿನ ಜನರನ್ನು ಸೇರಿಸಿದ ಕಾರಣ ಗೌರವ್ ತನೇಜಾ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

Join Whatsapp
Exit mobile version