ಇಸ್ರೇಲ್ ಗುರಿಯಾಗಿಸಿ ಯೆಮೆನ್ ನ ಹೌತಿಯಿಂದ ಕ್ಷಿಪಣಿ ದಾಳಿ

Prasthutha|

ಜೆರುಸಲೇಂ: ಕೇಂದ್ರ ಇಸ್ರೇಲ್ ಅನ್ನು ಗುರಿಯಾಗಿಟ್ಟುಕೊಂಡು ಯೆಮೆನ್ ನ ಹೌತಿಯು ಕ್ಷಿಪಣಿ ದಾಳಿ ನಡೆಸಿದೆ.

- Advertisement -


ದಾಳಿ ಬಗ್ಗೆ ಸೈರನ್ ಮೊಳಗುತ್ತಿದ್ದಂತೆ ಜನರು ಬಾಂಬ್ ಶೆಲ್ಟರ್ ಗಳಿಗೆ ಓಡಿಹೋಗಿದ್ದಾರೆ.


ಯೆಮೆನ್ ನಿಂದ ಉಡಾವಣೆಯಾದ ಕ್ಷಿಪಣಿಯನ್ನು ಹಲವು ಪ್ರಯತ್ನಗಳ ಬಳಿಕ ಪ್ರತಿಬಂಧಿಸಲಾಗಿದೆ ಎಂದು ಇಸ್ರೇಲಿ ಮಿಲಿಟರಿ ಹೇಳಿದೆ.

- Advertisement -


ಕ್ಷಿಪಣಿ ಅಥವಾ ಬಿದ್ದ ಅವಶೇಷಗಳಿಂದ ಯಾವುದೇ ಹಾನಿಯಾಗಿಲ್ಲ ಎಂದು ಇಸ್ರೇಲ್ ನ ಮ್ಯಾಗೆನ್ ಡೇವಿಡ್ ಆಡಮ್ ತುರ್ತು ಸೇವೆಯು ತಿಳಿಸಿದೆ. ಆದರೂ ಆಶ್ರಯತಾಣಗಳಿಗೆ ಓಡುವಾಗ ಕೆಲವರು ಗಾಯಗೊಂಡಿದ್ದಾರೆ.


ಸೋಮವಾರ ರಾತ್ರಿಯು ಒಂದು ಕ್ಷಿಪಣಿಯನ್ನು ಹೌತಿ ಉಡಾಯಿಸಿದೆ.



Join Whatsapp