Home ಟಾಪ್ ಸುದ್ದಿಗಳು ಯತ್ನಾಳ್ ಸಕ್ಕರೆ ಕಾರ್ಖಾನೆ: ಸರಕಾರದ ಆದೇಶ ವಿರುದ್ಧ ಹೈಕೋರ್ಟ್ ತಡೆಯಾಜ್ಞೆ

ಯತ್ನಾಳ್ ಸಕ್ಕರೆ ಕಾರ್ಖಾನೆ: ಸರಕಾರದ ಆದೇಶ ವಿರುದ್ಧ ಹೈಕೋರ್ಟ್ ತಡೆಯಾಜ್ಞೆ

ವಿಜಯಪುರ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾಲೀಕತ್ವದ ಸಕ್ಕರೆ ಕಾರ್ಖಾನೆ ಬಂದ್ ಮಾಡಲು ಸರ್ಕಾರ ನೀಡಿದ್ದ ಆದೇಶಕ್ಕೆ ಹೈಕೋರ್ಟ್​ ತಡೆಯಾಜ್ಞೆ ನೀಡಿದೆ. ​ಕಾಂಗ್ರೆಸ್ ಸರ್ಕಾರ ನಮ್ಮ ಸಿದ್ದಸಿರಿ ಸಕ್ಕರೆ ಹಾಗು ಎಥನಾಲ್ ಕಾರ್ಖಾನೆ ಮುಚ್ಚಲು ನೀಡಿದ್ದ ನೋಟಿಸ್ ಹಾಗೂ ಮುಚ್ಚುವ ಷಡ್ಯಂತ್ರಕ್ಕೆ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯ ತಡೆ ನೀಡಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಯತ್ನಾಳ್ ಮಾಹಿತಿ ಹಂಚಿಕೊಂಡಿದ್ದಾರೆ. ಇದು “ಸತ್ಯದ ಗೆಲುವು” ಎಂದೂ ಬರೆದುಕೊಂಡಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಒಡೆತನದ ಶುಗರ್ ಫ್ಯಾಕ್ಟರಿ ಬಂದ್​​ಗೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶ ಹೊರಡಿಸಿತ್ತು. ಸಿದ್ದಶ್ರೀ ಸಕ್ಕರೆ ಕಾರ್ಖಾನೆ ವಿರುದ್ಧ ಕಲುಷಿತ ನೀರು ಮುಲ್ಲಾಮಾರಿ ಜಲಾಶಯಕ್ಕೆ ಬಿಡಲಾಗುತ್ತಿತ್ತು ಎಂದು ಈ ಕ್ರಮಕೈಗೊಳ್ಳಲಾಗಿತ್ತು.. ವಾಯು, ಜಲ ಕಾಯ್ದೆ ಉಲ್ಲಂಘನೆ ಹಿ‌ನ್ನೆಲೆ ಫ್ಯಾಕ್ಟರಿ ಬಂದ್​ಗೆ ಆದೇಶ ನೀಡಲಾಗಿತ್ತು.

Join Whatsapp
Exit mobile version