ಶಿವಮೊಗ್ಗ: ಆಟವಾಡಲೆಂದು ಸಿಮೆಂಟ್ ಜಿಂಕೆ ಮೇಲೆ ಏರಿದ್ದ 6 ವರ್ಷದ ಮಗು ಆ ಪ್ರತಿಮೆ ಮುರಿದು ಬಿದ್ದು ಸಾವನ್ನಪ್ಪಿರುವ ಘಟನೆ ಶಿವಮೊಗ್ಗದ ಮುದ್ದಿನಕೊಪ್ಪದಲ್ಲಿರುವ ಟೀ ಪಾರ್ಕ್ ನಲ್ಲಿ ನಡೆದಿದೆ.
ಶಿವಮೊಗ್ಗ ನಗರದ ಹರೀಶ್, ಲಕ್ಷ್ಮೀ ದಂಪತಿ ಪುತ್ರಿ ಸಮೀಕ್ಷಾ ಮೃತ ಬಾಲಕ.
ಕುಟುಂಬಸ್ಥರು ಮಕ್ಕಳೊಂದಿಗೆ ಟೀ ಪಾರ್ಕ್ಗೆ ತೆರಳಿದ್ದರು. ಈ ವೇಳೆ ಸಿಮೆಂಟ್ ಜಿಂಕೆ ಮೇಲೆ ಮಗು ಕುಳಿತುಕೊಂಡ ವೇಳೆ ಸಿಮೆಂಟ್ ಜಿಂಕೆ ಮುರಿದು ಬಿದ್ದಿದೆ.
ಆಟವಾಡಲು ಪೋಷಕರೊಂದಿಗೆ ಮಗು ತೆರಳಿದ್ದು, ಈ ವೇಳೆ ದುರ್ಘಟನೆ ನಡೆದಿದು ಪೋಷಕರ ರೋದನೆ ಮುಗಿಳುಮುಟ್ಟಿದಡ. ಘಟನೆ ಸಂಬಂಧ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.