Home ಟಾಪ್ ಸುದ್ದಿಗಳು ಬಾಯ್’ಫ್ರೆಂಡ್ ಮಾತನಾಡುತ್ತಿಲ್ಲವೆಂದು ಪೊಲೀಸ್ ಠಾಣೆ ಮೆಟ್ಟಿಲೇರಿದ ಯುವತಿ !

ಬಾಯ್’ಫ್ರೆಂಡ್ ಮಾತನಾಡುತ್ತಿಲ್ಲವೆಂದು ಪೊಲೀಸ್ ಠಾಣೆ ಮೆಟ್ಟಿಲೇರಿದ ಯುವತಿ !

ಮನೆಯವರ ಮನವೊಲಿಸಿ ಮದುವೆ ಮಾಡಿಸಿದ ಪೊಲೀಸರು !

ಮಧ್ಯಪ್ರದೇಶ: ತನ್ನ ಜೊತೆ ಮಾತು ಬಿಟ್ಟ ಪ್ರಿಯತಮನ ವಿರುದ್ಧ ಯುವತಿಯೋರ್ವಳು ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ಮಧ್ಯಪ್ರದೇಶದ ಚಿಂದ್ವಾರದಲ್ಲಿ ನಡೆದಿದೆ. ಆಶ್ಚರ್ಯವೆಂದರೆ ಪೊಲೀಸರು ಯುವಕ –ಯುವತಿಯ ಜೊತೆ ಅವರ ಮನೆಯವರನ್ನೂ ಠಾಣೆಗೆ ಕರೆಯಿಸಿ ಎಲ್ಲರ ಮನವೊಲಿಸಿ ಮದುವೆಯನ್ನೂ ನೆರವೇರಿಸಿ ಕೊಟ್ಟಿದ್ದಾರೆ.

ತನ್ನೊಂದಿಗೆ ಮಾತು ಬಿಟ್ಟಿದ್ದ ಪ್ರಿಯತಮನ ಹುಟ್ಟಹಬ್ಬಕ್ಕೆ ಶುಭಾಶಯ ಕೋರಲು ಸಾಧ್ಯವಾಗದೆ ಯುವತಿ ಮಧ್ಯರಾತ್ರಿಯಲ್ಲಿ  ಪೊಲೀಸರಿಗೆ,100 ಸಂಖ್ಯೆಗೆ  ಕರೆ ಮಾಡಿ ದೂರು ಸಲ್ಲಿಸಿದ್ದಾಳೆ. ಯುವತಿಯ ಪರಿಸ್ಥಿತಿ ನೋಡಿದ ಚಿಂದ್ವಾರಾ ಪೊಲೀಸರು ಮಧ್ಯರಾತ್ರಿಯೇ ಯುವಕನನ್ನು ಠಾಣೆಗೆ ಕರೆಸಿಕೊಂಡಿದ್ದಾರೆ. ಇಬ್ಬರನ್ನು ಕುಳಿತುಕೊಳ್ಳಿಸಿ ಕೌನ್ಸಿಲಿಂಗ್ ನಡೆಸಿದ್ದು, ಇದೀಗ ಮನೆಯವರ ಒಪ್ಪಿಗೆಯೊಂದಿಗೆ ಮಾತು ಬಿಟ್ಟಿದ್ದ ಯುವಕ , ಪ್ರಿಯತಮೆಯೊಂದಿಗೆ ಮದುವೆಯಾಗಲು ನಿರ್ಧರಿಸಿದ್ದಾನೆ.

ಕೊನೆಗೆ ಆರ್ಯ ಸಮಾಜ ಮಂದಿರದಲ್ಲಿ ಪೊಲೀಸರ ಸಮ್ಮುಖದಲ್ಲೇ ಮದುವೆಯಾಗಿರುವುದಾಗಿ ವರದಿಯಾಗಿದೆ.

Join Whatsapp
Exit mobile version