Home ಟಾಪ್ ಸುದ್ದಿಗಳು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಕಸಾಯಿಖಾನೆಗೂ ನಾಲಾಯಕ್ಕು: ರಮೇಶ್ ಕುಮಾರ್ ಕಿಡಿ

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಕಸಾಯಿಖಾನೆಗೂ ನಾಲಾಯಕ್ಕು: ರಮೇಶ್ ಕುಮಾರ್ ಕಿಡಿ

ಬೆಂಗಳೂರು: ಇಂದಿನ ಕಲಾಪದ ನಡೆವೆ ಬಾಣಂತಿಯರಿಗೆ ಪೌಷ್ಠಿಕಾಂಶದ ಆಹಾರ ವಿತರಿಸುವ ‘ಮಾತೃಪೂರ್ಣ’ ಯೋಜನೆಯ ಬಗ್ಗೆಯ ಚರ್ಚೆಯ ಕುರಿತಾಗಿ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ರಮೇಶ್ ಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿರುವ ಅಧಿಕಾರಿಗಳು ಕಸಾಯಿಖಾನೆಗಳಲ್ಲಿ ಕೆಲಸ ಮಾಡುವುದಕ್ಕೂ ನಾಲಾಯಕ್ಕು ಎಂದು ಕಿಡಿಕಾರಿದ್ದಾರೆ.

ಸದನದಲ್ಲಿ ಮಾತನಾಡಿದ ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ, ಮಾತೃಪೂರ್ಣ ಯೋಜನೆಯನ್ನು ಬಾಣಂತಿಯರಿಗೆ ಪೌಷ್ಟಿಕತೆ ಹೆಚ್ಚಿಸುವುದು ಶಿಶು ಮರಣ ಪ್ರಮಾಣ ಮತ್ತು ಹೆರಿಗೆ ಸಂದರ್ಭದಲ್ಲಿ ಮರಣ ಪ್ರಮಾಣ ಕಡಿಮೆ ಮಾಡುವ ಉದ್ದೇಶದಿಂದ ಜಾರಿಗೆ ತರಲಾಗಿದೆ. ಆದರೆ ಯೋಜನೆಯಲ್ಲಿ ಬಾಣಂತಿಯರು ಪೌಷ್ಠಿಕಾಂಶದ ಊಟ ಮಾಡಲು ಅಂಗನವಾಡಿ ಕೇಂದ್ರಕ್ಕೆ ಬರಬೇಕೆಂದು ಉಲ್ಲೇಖಿಸಲಾಗಿದೆ. ಆದರೆ ನಮ್ಮ ಕ್ಷೇತ್ರ ಗುಡ್ಡಗಾಡು ಪ್ರದೇಶದಿಂದ ಕೂಡಿದೆ. ಎರಡು ಮೂರು ಕಿ.ಮೀ. ದೂರ ನಡೆದು ಬಂದು ಬಾಣಂತಿಯರು ಹೇಗೆ ಊಟ ಮಾಡಲು ಸಾದ್ಯ ಎಂದು ಸಚಿವರನ್ನು ಪ್ರಶ್ನಿಸಿದ್ದಾರೆ.

ಈ ವೇಳೆ ಮಧ್ಯಪ್ರವೇಶಿಸಿದ ಶಾಸಕ ರಮೇಶ್ ಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮಾನವೀಯತೆ ಬೇಕಾಗಿದೆ ಎಂದು ಕಿಡಿಕಾರಿದರು. ಅಧಿಕಾರಿಗಳ ಅಸಡ್ಡೆಯಿಂದಲೇ ಇಲಾಖೆ ಈ ರೀತಿ ಕೆಟ್ಟುಹೋಗಿದೆ, ಇವರು ಕಸಾಯಿ ಖಾನೆಯಲ್ಲಿ ಇರುವುದಕ್ಕೂ ಲಾಯಕ್ಕಿಲ್ಲ ಎಂದು ಗರಂ ಆಗಿದ್ದಾರೆ.

ಅಪಘಾತದಲ್ಲಿ ಸಾವಿಗೀಡಾದ ನಮ್ಮ ಕ್ಷೇತ್ರದ ಯುವಕನೋರ್ವನ ಪತ್ನಿಯ ಅಂಗನವಾಡಿ ಅರ್ಜಿಯಲ್ಲಿ ಆಕೆಯ ಹೆಸರು ವ ಬದಲು ಅ ಎಂದು ಬರೆದು ತಪ್ಪಾಗಿತ್ತು. ಇದನ್ನೇ ನೆಪವಾಗಿಟ್ಟು ಅಧಿಕಾರಿಗಳು ಆ ಮಹಿಳೆಗೆ ಉದ್ಯೋಗ ನಿರಾಕರಿಸಿ, ಹಣವನ್ನು ಪಡೆದು ಮತ್ತಿನ್ಯಾರೋ ಮಹಿಳೆಗೆ ಉದ್ಯೋಗ ಕೊಟ್ಟಿದ್ದಾರೆ. ಈ ಬಗ್ಗೆ ಜೋರು ಧ್ವನಿಯಲ್ಲಿ ಪ್ರಶ್ನಿಸಿದರೆ ಮಾತನ್ನ ರೆಕಾರ್ಡ್ ಮಾಡಿ ಮಾದ್ಯಮಗಳಿಗೆ ಕೊಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಸ್ಪೀಕರ್ ಕಾಗೇರಿ, ಮುಖ್ಯಮಂತ್ರಿಗಳೊಂದಿಗೆ ಇಲಾಖೆಯಲ್ಲಿನ ಅಧಿಕಾರಿಗಳನ್ನು ಬದಲಾಯಿಸುವ ಸಂಬಂಧ ಚರ್ಚೆ ಮಾಡಿ, ಉತ್ತಮ ಅಧಿಕಾರಿಗಳನ್ನು ನೇಮಿಸುವಂತೆ ಸಚಿವ ಹಾಲಪ್ಪ ಆಚಾರ್ ಗೆ ಸಲಹೆ ನೀಡಿದರು.

Join Whatsapp
Exit mobile version