Home ಟಾಪ್ ಸುದ್ದಿಗಳು ಏಕ ಕಾಲದಲ್ಲಿ ‘ಆರೆಸ್ಸೆಸ್ಸಿಗ ಮತ್ತು ದೇಶಪ್ರೇಮಿ’ ಆಗಲು ಸಾಧ್ಯವಿಲ್ಲ: ಪ್ರಿಯಾಂಕ್ ಖರ್ಗೆ

ಏಕ ಕಾಲದಲ್ಲಿ ‘ಆರೆಸ್ಸೆಸ್ಸಿಗ ಮತ್ತು ದೇಶಪ್ರೇಮಿ’ ಆಗಲು ಸಾಧ್ಯವಿಲ್ಲ: ಪ್ರಿಯಾಂಕ್ ಖರ್ಗೆ

ಬೆಂಗಳೂರು: ಏಕ ಕಾಲದಲ್ಲಿ ‘ಆರೆಸ್ಸೆಸ್ಸಿಗ ಮತ್ತು ದೇಶಪ್ರೇಮಿ’ ಆಗಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

‘ಸಾಂವಿಧಾನಿಕ ಸಭೆಯು ಸಂವಿಧಾನದ ಬಗ್ಗೆ ಚರ್ಚೆಗಳನ್ನು ನಡೆಸುವಾಗ, ಆರೆಸ್ಸೆಸ್ ಸಂವಿಧಾನದ ಪ್ರತಿಗಳನ್ನು ಸುಟ್ಟು ಹಾಕಿ ಮನುಸ್ಮೃತಿಯನ್ನು ಭಾರತದ ಸಂವಿಧಾವನ್ನಾಗಿ ಮಾಡಬೇಕೆಂದು ಬಯಸಿತ್ತು.

ಸಭಾಧ್ಯಕ್ಷರು ಸಂವಿಧಾನದ ಬಗ್ಗೆ ಚರ್ಚೆಗಳನ್ನು ಮಾಡುತ್ತಾ ತಾನು ಸಂವಿಧಾನದ ಮೌಲ್ಯಗಳನ್ನು ಕಾಪಾಡುವುದಾಗಿ ಹೇಳುತ್ತಾರೆ. ಅದೇ ವೇಳೆ ಆರೆಸ್ಸೆಸ್ಸನ್ನೂಹೊಗಳುತ್ತಾರೆ. ಏಕ ಕಾಲದಲ್ಲಿ ಆರೆಸ್ಸೆಸ್ ಮತ್ತು ದೇಶಪ್ರೇಮಿಯಾಗಲು ಸಾಧ್ಯವಿಲ್ಲ’.

‘ಪ್ರಧಾನಿ ಸೇರಿದಂತೆ ಇಂದಿನ ಹಿಂದುತ್ವದ ಐಕಾನ್‌ಗಳ ಗುರು ಎಂಎಸ್ ಗೋಲ್ವಾಲ್ಕರ್,  ಭಾರತೀಯ ಸಂವಿಧಾನವನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ನಾನು ಮೊದಲೇ ಹೇಳಿದಂತೆ, ಏಕ ಕಾಲದಲ್ಲಿ ಆರೆಸ್ಸೆಸ್ ಮತ್ತು ದೇಶಭಕ್ತರಾಗಲು ಸಾಧ್ಯವಿಲ್ಲ’ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿದ್ದಾರೆ.

Join Whatsapp
Exit mobile version