Home ಟಾಪ್ ಸುದ್ದಿಗಳು ಒಂದು ಸಮುದಾಯವನ್ನು ಓಲೈಕೆ ಮಾಡಲು ಹುಬ್ಬಳ್ಳಿ ಗಲಭೆ ಪ್ರಕರಣ ಹಿಂಪಡೆದಿರುವುದು ಸರಿಯಲ್ಲ: ಶೆಟ್ಟರ್

ಒಂದು ಸಮುದಾಯವನ್ನು ಓಲೈಕೆ ಮಾಡಲು ಹುಬ್ಬಳ್ಳಿ ಗಲಭೆ ಪ್ರಕರಣ ಹಿಂಪಡೆದಿರುವುದು ಸರಿಯಲ್ಲ: ಶೆಟ್ಟರ್

ಧಾರವಾಡ: ಹುಬ್ಬಳ್ಳಿ ಗಲಭೆ ಪ್ರಕರಣ ಹಿಂಪಡೆದ ರಾಜ್ಯ ಸರ್ಕಾರದ ನಿರ್ಧಾರವನ್ನು ಬಿಜೆಪಿ ಸಂಸದ ಜಗದೀಶ್ ಶೆಟ್ಟರ್ ಖಂಡಿಸಿದರು.


“ಕೇವಲ ಒಂದು ಸಮುದಾಯವನ್ನು ಓಲೈಕೆ ಮಾಡಿಕೊಳ್ಳಲು ಸರ್ಕಾರ ಈ ರೀತಿಯ ನಿರ್ಧಾರ ತೆಗೆದುಕೊಂಡಿರುವುದು ಸರಿಯಲ್ಲ” ಎಂದರು.


ನಗರದಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, “ಯಾವ ಕೇಸು ಮರಳಿ ಪಡೆಯಬೇಕು. ಯಾವ ಕೇಸು ವಾಪಸ್ ಪಡೆಯಬಾರದು ಅನ್ನೋದು ತಿಳಿಯಬೇಕಿತ್ತು. ಎಲ್ಲ ಸರ್ಕಾರದಲ್ಲಿ ಕೆಲ ಕೇಸ್ ಗಳನ್ನು ಮರಳಿ ಪಡೆಯೋದು ಸಾಮಾನ್ಯ. ರೈತ ಹೋರಾಟ, ಮಹದಾಯಿ ಹೊರಾಟದ ಕೇಸು ಹಿಂಪಡೆದರೆ ಸರಿ. ಆದರೆ ಪೊಲೀಸ್ ಠಾಣೆ ಮೇಲೆ ದಾಳಿ, ಪೊಲೀಸರ ಮೇಲೆ ದಾಳಿ ಮಾಡಿದ ಕೇಸು ಮರಳಿ ಪಡೆದಿದ್ದು ಸರಿಯಲ್ಲ. ಇದು ಕಾನೂನು ಸುವ್ಯವಸ್ಥೆ ಹದಗೆಡಲು ಬೆಂಬಲ ನೀಡಲು ಅವಕಾಶ ನೀಡುತ್ತದೆ” ಎಂದು ಹೇಳಿದರು.


“ಇಡೀ ಸಮಾಜವನ್ನು ಒಂದಾಗಿ ನೋಡಬೇಕು. ವ್ಯವಸ್ಥೆ ಹದಗೆಡುವ ರೀತಿಗೆ ಪ್ರೋತ್ಸಾಹ ಕೊಡಬಾರದು. ಈ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ರಾಜಕೀಯ ಲಾಭಕ್ಕಾಗಿ ಈ ರೀತಿ ಮಾಡಲಾಗುತ್ತಿದೆ. ಇದರಿಂದ ಒಳ್ಳೆಯದು ಆಗಲ್ಲ. ಎಷ್ಟೋ ವರ್ಷಗಳಿಂದ ರೌಡಿಶೀಟರ್ ಇದ್ದಾರೆ. ಅವರ ಮೇಲೆ ರೌಡಿಶೀಟ್ ಹಾಗೆಯೇ ಮುಂದುವರೆದಿದೆ. ಇದರಿಂದ ಕೆಲ ಅಮಾಯಕರು ತೊಂದರೆಯಲ್ಲಿದ್ದಾರೆ. ಅಂಥವರ ರೌಡಿಶೀಟ್ ತೆಗೆಯಲಿ, ಆ ಮೂಲಕ ಅವರನ್ನು ಒಳ್ಳೆಯವರನ್ನಾಗಿ ಮಾಡಲಿ. ಆದರೆ ಗೂಂಡಾಗಿರಿ ಮಾಡಿದವರ ಕೇಸ್ ಮರಳಿ ಪಡೆದಿರುವುದು ಅಕ್ಷಮ್ಯ ಅಪರಾಧ” ಎಂದು ತಿಳಿಸಿದರು.

Join Whatsapp
Exit mobile version