Home ಟಾಪ್ ಸುದ್ದಿಗಳು ಜಪಾನಿನ ನಿಹಾನ್ ಹಿಡಾಂಕ್ಯೊ ಸಂಸ್ಥೆಗೆ ಶಾಂತಿ ನೊಬೆಲ್ ಪ್ರಶಸ್ತಿ

ಜಪಾನಿನ ನಿಹಾನ್ ಹಿಡಾಂಕ್ಯೊ ಸಂಸ್ಥೆಗೆ ಶಾಂತಿ ನೊಬೆಲ್ ಪ್ರಶಸ್ತಿ

ಜಪಾನಿನ ನಿಹಾನ್ ಹಿಡಾಂಕ್ಯೊ ಸಂಸ್ಥೆಗೆ ಈ ಬಾರಿ 2024ನೇ ಶಾಂತಿ ನೊಬೆಲ್ ಪ್ರಶಸ್ತಿ ಬಂದಿದೆ.


ಪರಮಾಣು ಶಸ್ತ್ರಾಸ್ತ್ರಗಳಿಂದ ಮುಕ್ತ ಜಗತ್ತನ್ನು ಸಾಧಿಸುವ ಪ್ರಯತ್ನ ಹಾಗೂ ಪರಮಾಣು ಶಸ್ತ್ರಾಸ್ತ್ರಗಳನ್ನು ಮತ್ತೆ ಎಂದಿಗೂ ಬಳಸಬಾರದು ಎಂದು ಸಾಕ್ಷಿ ಸಾಕ್ಷ್ಯದ ಮೂಲಕ ಪ್ರದರ್ಶಿಸುತ್ತಿರುವುದಕ್ಕೆ ಪ್ರಶಸ್ತಿ ನೀಡಿಲಾಗಿದೆ.


ಹಿರೋಷಿಮಾ ಮತ್ತು ನಾಗಾಸಾಕಿಯಿಂದ ಪರಮಾಣು ಬಾಂಬ್ ದಾಳಿಯಿಂದ ಬದುಕಿ ಜನರ ಸ್ಥಿತಿಯನ್ನು ಕಂಡು, ಇನ್ನು ಮುಂದೆ ಯಾವ ದೇಶವು ಪರಮಾಣು ಬಾಂಬ್ ದಾಳಿಯನ್ನು ನಡೆಸಬಾರದು ಎಂದು ಈ ಕಂಪನಿ ಜಾಗೃತಿಯನ್ನು ಮೂಡಿಸಿದೆ. ನೊಬೆಲ್ ಶಾಂತಿ ಪ್ರಶಸ್ತಿ ಸಮಿತಿಯು ಈ ಪ್ರಶಸ್ತಿಯನ್ನು ನೀಡಿದೆ.


ನಾರ್ವೆಯ ಓಶೋದಲ್ಲಿ ಶಾಂತಿ ಪ್ರಶಸ್ತಿಯನ್ನು ನೀಡಲಾಯಿತು. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ನಿಹಾನ್ ಹಿಡಾಂಕ್ಯೊ ಸಹ ಮುಖ್ಯಸ್ಥರು ಇದು ನಮ್ಮ ಗೆಲುವು, ನೊಬೆಲ್ ಗೆಲ್ಲುತ್ತೇನೆ ಎಂದು ಕನಸು ಕಂಡಿರಲಿಲ್ಲ ಎಂದು ಹೇಳಿದ್ದಾರೆ. ಜಪಾನಿನ ಹಿರೋಷಿಮಾ ಮತ್ತು ನಾಗಸಾಕಿ ನಗರಗಳ ಮೇಲೆ ಅಮೆರಿಕ ನಡೆಸಿದ ಪರಮಾಣು ದಾಳಿಯ ಸಂತ್ರಸ್ತರ ಬಗ್ಗೆ ಅನೇಕ ಸಾಕ್ಷ್ಯ ಚಿತ್ರಗಳನ್ನು ಮಾಡಿದೆ. ಈ ಬಗ್ಗೆ ಸಾರ್ವಜನಿಕರಿಗೆ ತಿಳಿಸುವ ಜತೆಗೆ ಮುಂದಿನ ದಿನಗಳಲ್ಲಿ ಯಾವ ದೇಶವು ಪರಮಾಣು ದಾಳಿಗಳನ್ನು ನಡೆಸಬಾರದು ಎಂದು ಹೇಳಿದೆ.

Join Whatsapp
Exit mobile version