Home ಟಾಪ್ ಸುದ್ದಿಗಳು ವಾಮಾಚಾರದ ಆರೋಪ: ಒಂದೇ ಕುಟುಂಬದ ಐವರ ಸಜೀವ ದಹನ

ವಾಮಾಚಾರದ ಆರೋಪ: ಒಂದೇ ಕುಟುಂಬದ ಐವರ ಸಜೀವ ದಹನ

0

ಪೂರ್ಣಿಯಾ: ಬಿಹಾರದ ಪೂರ್ಣಿಯಾ ಜಿಲ್ಲೆಯಲ್ಲಿ ಒಂದೇ ಕುಟುಂಬದ ಐವರನ್ನು ಪೊದೆಯೊಂದರಲ್ಲಿ ಹಾಕಿ ಸಜೀವ ದಹನ ಮಾಡಲಾಗಿದ್ದು, ಪೊಲೀಸರು ವಾಮಾಚಾರದ ಶಂಕೆ ವ್ಯಕ್ತಪಡಿಸಿದ್ದಾರೆ.

ಸೋಮವಾರ ಪ್ರಕರಣ ಬೆಳಕಿಗೆ ಬಂದಿದ್ದು, ಇಬ್ಬರನ್ನು ಬಂಧಿಸಲಾಗಿದೆ. ಇತರೆ ಆರೋಪಿಗಳಿಗೆ ಶೋಧ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಟೆಟ್ಮಾ ಗ್ರಾಮದಲ್ಲಿ ಭಾನುವಾರ ರಾತ್ರಿ ಮಾಟ–ಮಂತ್ರದ ಆಚರಣೆಗಾಗಿ ಐವರನ್ನೂ ಕೊಲೆ ಮಾಡಿ ಆನಂತರ ಪೊದೆಯೊಂದರಲ್ಲಿ ಹಾಕಿ ಸುಟ್ಟಿರಬಹುದು ಎಂದು ಡಿಐಜಿ ಪ್ರಮೋದ್ ಕುಮಾರ್ ಮಂಡಲ್‌ ತಿಳಿಸಿದ್ದಾರೆ.

ಸೋಮವಾರ ಬೆಳಿಗ್ಗೆ ಬಾಲಕ ಸೋನುಕುಮಾರ್ ಎಂಬಾತ ಪೊಲೀಸರಿಗೆ ಮಾಹಿತಿ ನೀಡಿದ್ದ. ಕೊಲೆ ಮಾಡಿದ್ದಾರೆ ಎನ್ನಲಾದವರೂ ಅದೇ ಕುಟುಂಬಕ್ಕೆ ಸೇರಿದವರು ಎಂದು ಹೇಳಲಾಗುತ್ತಿದೆ. ವಿಧಿವಿಜ್ಞಾನ ತಜ್ಞರ ತಂಡ ಸ್ಥಳ ‍ಪರಿಶೀಲನೆ ಮಾಡಿದೆ.

ಘಟನೆಗೆ ಆರ್‌ಜೆಡಿ ಸೇರಿದಂತೆ ವಿವಿಧ ಪಕ್ಷಗಳ ನಾಯಕರು ಆಘಾತ ವ್ಯಕ್ತಪಡಿಸಿ, ಇದು ಕಾನೂನು ಸುವ್ಯವಸ್ಥೆ ಕುಸಿತಕ್ಕೆ ಸಾಕ್ಷಿ ಎಂದಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version