ಶಿವಮೊಗ್ಗ: ಬಿಜೆಪಿ ನಾಯಕರು ಮನವೊಲಿಕೆಗೆ ಕಸರತ್ತು ಮಾಡ್ತಿರುವ ಮಧ್ಯೆಯೇ ಮಾಜಿ ಸಚಿವ ಈಶ್ವರಪ್ಪ ಸುದ್ದಿಗೋಷ್ಠಿ ನಡೆಸಿ ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ಗುಡುಗಿದ್ದಾರೆ.
ಯಡಿಯೂರಪ್ಪ ನವರೇ ಸ್ವತಃ ಕೆಜೆಪಿ ಕಟ್ಟಿದಗಾದ ಕೇವಲ 8 ಸೀಟು ತೆಗೆದುಕೊಂಡಿದ್ದರು. ಲಿಂಗಾಯತ ಸಮುದಾಯದವರು ಬಿಜೆಪಿಗೆ ಬರುತ್ತಾರೆ ಎಂಬ ಭ್ರಮೆಯಲ್ಲಿ ಕೇಂದ್ರದ ನಾಯಕರು ಇದ್ದಾರೆ. ಹಿಂದುತ್ವ ಎಂದು ಹೋದವರಿಗೆ ಪಾರ್ಟಿಯಲ್ಲಿ ಅನ್ಯಾಯವಾಗಿದೆ ಎಂದು ಹೇಳಿದ್ದಾರೆ.
ವಿಜಯೇಂದ್ರರನ್ಬು ಯಾಕೆ ರಾಜ್ಯಾಧ್ಯಕ್ಷ ಮಾಡಿದ್ದಾರೆ, ಒಕ್ಕಲಿಗರಿಗೆ ಕೊಡಬಹುದಿತ್ತಲ್ಲಾ? ಸಿಟಿ ರವಿ ಯಾಕೆ ಇವರಿಗೆ ಕಾಣಲಿಲ್ಲ? ನನ್ನ ಜೀವನದಲ್ಲಿ ನಾನು ಪಕ್ಷವನ್ನು ಬಿಟ್ಟಿಲ್ಲ. ಅವರು ಕೇಳಿದಾಗ ರಾಜೀನಾಮೆ ಕೊಟ್ಟೆ, ದೇವೇಗೌಡರ ವಿರುದ್ಧ ನಿಲ್ಲಿಸಿದಾಗ ನಾನೂ ನಿಂತಿದ್ದೇನೆ ಎಂದು ಈಶ್ವರಪ್ಪ ನೇರವಾಗಿ ಯಡಿಯೂರಪ್ಪ ವಿರುದ್ದ ಪ್ರಹಾರ ನಡೆಸಿದ್ದಾರೆ.
ಈಗ ನಾನೂ ಯಾಕೆ ಪಕ್ಷೇತರನಾಗಿ ನಿಂತೆ ಎಂದರೆ,ಯಡಿಯೂರಪ್ಪ ಫ್ಯಾಮಿಲಿಯ ಕಪಿ ಮುಷ್ಠಿಯಿಂದ ಪಕ್ಷ ಬಿಡಿಸಬೇಕಿದೆ. ಯಾರೇ ಬಂದರೂ ಸಹಾ ನಾನೂ ಲೋಕಸಭಾ ಚುನಾವಣೆಯಲ್ಲಿ ನಿಲ್ಲುತ್ತೇನೆ. ಎಲ್ಲ ಜನಾಂಗದವರೂ ನನ್ನ ಜೊತೆಗೆ ಇದ್ದಾರೆ. ಎಲ್ಲರ ಆಸೆ ಇರುವುದರಿಂದ ನಾನು ನಿಲ್ಲುತ್ತಿರುವುದು ಎಂದರು.
ಯಡಿಯೂರಪ್ಪ ಅವರಿಂದ ಗೆಲ್ಲುತ್ತೇವೆ ಎಂದ ಭ್ರಮೆಯಲ್ಲಿ ಕೇಂದ್ರದ ನಾಯಕರು ಇದ್ದಾರೆ. ನಾವೂ ಕಾಂಗ್ರೆಸ್ ಗೆ ಬೈಯುತ್ತೇವೆ, ಕುಟುಂಬದ ಜೊತೆ ಕಾಂಗ್ರೆಸ್ ಇದೇ ಎಂದು ಹೇಳುತ್ತೇವೆ. ಆದರೆ ಬಿಜೆಪಿ ಈಗ ಯಡಿಯೂರಪ್ಪ ಫ್ಯಾಮಿಲಿ ಕೈಗೆ ಈಗ ಸಿಕ್ಕಿಕೊಂಡಿದೆ ಎಂದು ಟೀಕಿಸಿದ್ದಾರೆ.