Home ಟಾಪ್ ಸುದ್ದಿಗಳು ಗುಜರಾತ್: ನಮಾಝ್ ನಿರತ ವಿದೇಶಿ ನಿರತ ವಿದ್ಯಾರ್ಥಿಗಳ ಮೇಲೆ ಗುಂಪು ಹಲ್ಲೆ, ನೋಡುತ್ತಾ ನಿಂತ ಪೊಲೀಸರು!

ಗುಜರಾತ್: ನಮಾಝ್ ನಿರತ ವಿದೇಶಿ ನಿರತ ವಿದ್ಯಾರ್ಥಿಗಳ ಮೇಲೆ ಗುಂಪು ಹಲ್ಲೆ, ನೋಡುತ್ತಾ ನಿಂತ ಪೊಲೀಸರು!

ಅಹಮದಾಬಾದ್: ಇಲ್ಲಿನ ವಿಶ್ವವಿದ್ಯಾನಿಲಯದ ಹಾಸ್ಟೆಲ್‌ನಲ್ಲಿ ರಮಝಾನ್‌ ಪ್ರಯುಕ್ತ ರಾತ್ರಿಯ ತರಾವೀಹ್ ನಮಾಝ್ ಮಾಡುತ್ತಿದ್ದ ವಿದೇಶಿ ವಿದ್ಯಾರ್ಥಿಗಳ ಮೇಲೆ ಸಂಘಪರಿವಾರದ ಗೂಂಡಾಗಳು ದಾಂಧಲೆ ನಡೆಸಿ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ಶನಿವಾರ ರಾತ್ರಿ ನಡೆದಿದೆ. ಹಾಸ್ಟೆಲ್‌ಗೆ ಜೈ ಶ್ರೀರಾಮ್ ಎನ್ನುತ್ತಾ ನುಗ್ಗಿದ ಗುಂಪು ಹಲ್ಲೆ ನಡೆಸಿದೆ.

ದಾಳಿಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲಾಗುತ್ತಿದೆ. ಘಟನೆಯ ವೇಳೆ ಸ್ಥಳದಲ್ಲಿ ಪೊಲೀಸರು ಉಪಸ್ಥಿತರಿದ್ದರೂ ಕೂಡ ಅವರು ಪ್ರತಿಕ್ರಿಯಿಸದೆ ನೋಡುತ್ತಾ ನಿಂತಿರುವುದು ಕೂಡ ವೀಡಿಯೊದಲ್ಲಿ ದಾಖಲಾಗಿದೆ.

ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಸಂತ್ರಸ್ತ ವಿದ್ಯಾರ್ಥಿಗಳು, ಶನಿವಾರ ರಾತ್ರಿ ತಮ್ಮ ಹಾಸ್ಟೆಲ್‌ನಲ್ಲಿ ರಮಝಾನ್ ತಿಂಗಳ ಹಿನ್ನೆಲೆಯಲ್ಲಿ ರಾತ್ರಿಯ ವೇಳೆ ತರಾವೀಹ್ ನಮಾಝ್ ಮಾಡುತ್ತಿದ್ದಾಗ ಗುಂಪೊಂದು ಜೈ ಶ್ರೀರಾಮ್ ಘೋಷಣೆ ಕೂಗುತ್ತಾ, ನುಗ್ಗಿ ದಾಂಧಲೆ ನಡೆಸಿ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ನೋವು ತೋಡಿಕೊಂಡಿದ್ದಾರೆ.

Join Whatsapp
Exit mobile version