Home ಟಾಪ್ ಸುದ್ದಿಗಳು ಭಾರತ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಟ್ರಂಪ್ ಕನಿಷ್ಠ 21 ಬಾರಿ ಹೇಳಿದರೂ ಪ್ರಧಾನಿ ಮೋದಿ...

ಭಾರತ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಟ್ರಂಪ್ ಕನಿಷ್ಠ 21 ಬಾರಿ ಹೇಳಿದರೂ ಪ್ರಧಾನಿ ಮೋದಿ ಮೌನ ವಹಿಸಿರುವುದು ಏಕೆ: ಕಾಂಗ್ರೆಸ್ ಪ್ರಶ್ನೆ

0

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕನಿಷ್ಠ 21 ಬಾರಿ ಭಾರತ ಮತ್ತು ಪಾಕಿಸ್ತಾನ ನಡುವಿನ ‘ಕದನ ವಿರಾಮ’ಕ್ಕೆ ತಾನು ಮಧ್ಯಸ್ಥಿಕೆ ವಹಿಸಿದ್ದೇನೆ ಎಂಬ ಹೇಳಿಕೆಯನ್ನು ಪುನರಾವರ್ತಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಈ ವಿಷಯದ ಬಗ್ಗೆ ಯಾವಾಗ ಮೌನ ಮುರಿಯುತ್ತಾರೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ನಿನ್ನೆ ಅಮೆರಿಕ ಅಧ್ಯಕ್ಷ ಟ್ರಂಪ್ ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಬಗ್ಗೆ ನೀಡಿದ ಹೇಳಿಕೆಯಲ್ಲಿ, ಸಂಭಾವ್ಯ ವ್ಯಾಪಾರ ಪರಿಣಾಮಗಳನ್ನು ಬಳಸಿಕೊಳ್ಳುವ ಮೂಲಕ ಅಮೆರಿಕವು ಎರಡು ಪರಮಾಣು ಶಸ್ತ್ರಸಜ್ಜಿತ ನೆರೆಹೊರೆಯವರ ನಡುವಿನ ಹಗೆತನ ಉಲ್ಬಣಗೊಳ್ಳುವುದನ್ನು ತಡೆದಿದೆ ಎಂದು ಮತ್ತೊಮ್ಮೆ ಹೇಳಿದ್ದಾರೆ.

ಭಾರತ-ಪಾಕ್ ಮಧ್ಯೆ ಯುದ್ಧ ಮುಂದುವರಿದರೆ ವ್ಯಾಪಾರ ಸಂಬಂಧಗಳು ಸ್ಥಗಿತಗೊಳ್ಳುತ್ತವೆ ಎಂದು ಎರಡೂ ದೇಶಗಳಿಗೆ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

ಟ್ರಂಪ್ ಕಳೆದ 59 ದಿನಗಳಲ್ಲಿ ಕನಿಷ್ಠ 21 ಬಾರಿ ಈ ಹೇಳಿಕೆ ಪುನರಾವರ್ತಿಸಿದ್ದಾರೆ. ಮೇ ತಿಂಗಳಲ್ಲಿ ನಾಲ್ಕು ದಿನಗಳ ಭಾರತ-ಪಾಕಿಸ್ತಾನ ಯುದ್ಧವನ್ನು ನಿಲ್ಲಿಸಿದೆ ಎಂದು ಹೇಳಿಕೊಂಡಿದ್ದಾರೆ, ಅದು ಅವರ ಪ್ರಕಾರ ಪರಮಾಣು ಶಸ್ತ್ರಸಜ್ಜಿತ ದೇಶಗಳು ಮುಖಾಮುಖಿಯಾಗಿ ಉಲ್ಬಣಗೊಳ್ಳುವ ಅಂಚಿನಲ್ಲಿತ್ತು, ಅದನ್ನು ತಾನು ತಡೆದಿದ್ದೇನೆ ಎಂಬರ್ಥದಲ್ಲಿ ಹೇಳಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ ವಿಭಾಗ) ಜೈರಾಮ್ ರಮೇಶ್ ಹೇಳಿದ್ದಾರೆ.

ಅಮೆರಿಕ ಅಧ್ಯಕ್ಷರು ತಾವು ಎರಡು ದೇಶಗಳ ಮಧ್ಯೆ ಶಾಂತಿಸ್ಥಾಪನೆಯಾಗುವಂತೆ ಮಾಡಿದ್ದೇನೆ, ಇಲ್ಲದಿದ್ದರೆ ಭಾರತ-ಯುಎಸ್ ವ್ಯಾಪಾರ ಒಪ್ಪಂದಕ್ಕೆ ಧಕ್ಕೆಯಾಗುತ್ತಿತ್ತು ಎಂಬರ್ಥದಲ್ಲಿ ಹೇಳಿಕೊಂಡಿದ್ದಾರೆ. ಯುದ್ಧವನ್ನು ನಿಲ್ಲಿಸಿ ಅಥವಾ ಅಮೆರಿಕನ್ ಮಾರುಕಟ್ಟೆಗೆ ಪ್ರವೇಶ ನಷ್ಟವನ್ನು ಎದುರಿಸಿ ಎಂದು ನೇರವಾಗಿ ಟ್ರಂಪ್ ಅವರು ಭಾರತಕ್ಕೆ ಸಂದೇಶ ನೀಡಿದ್ದರು, ಆದರೆ ಈ ಬಗ್ಗೆ ಪ್ರಧಾನಿ ಮೋದಿಯವರು ಪ್ರತಿಕ್ರಿಯೆ ನೀಡಿಯೇ ಇಲ್ಲ, ಮೌನ ವಹಿಸಿರುವುದು ಏಕೆ, ಅವರು ಯಾವಾಗ ಮೌನ ಮುರಿಯುತ್ತಾರೆ ಎಂದು ಜೈರಾಂ ರಮೇಶ್ ಪ್ರಶ್ನಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version