Home ಟಾಪ್ ಸುದ್ದಿಗಳು ತಾಂತ್ರಿಕ ದೋಷ: ರಾಯಪುರಕ್ಕೆ ತೆರಳುತ್ತಿದ್ದ ಇಂಡಿಗೊ ವಿಮಾನ ಇಂದೋರ್‌ಗೆ ವಾಪಸ್‌

ತಾಂತ್ರಿಕ ದೋಷ: ರಾಯಪುರಕ್ಕೆ ತೆರಳುತ್ತಿದ್ದ ಇಂಡಿಗೊ ವಿಮಾನ ಇಂದೋರ್‌ಗೆ ವಾಪಸ್‌

0

ಇಂದೋರ್: 51 ಪ್ರಯಾಣಿಕರನ್ನು ಹೊತ್ತು ಇಂದೋರ್‌ನಿಂದ ರಾಯಪುರಕ್ಕೆ ತೆರಳುತ್ತಿದ್ದ ಇಂಡಿಗೊ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಇಲ್ಲಿನ ವಿಮಾನ ನಿಲ್ದಾಣಕ್ಕೆ ಮರಳಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇಂದೋರ್‌ನಿಂದ ಹೊರಟು ಸುಮಾರು 60 ನಾಟಿಕಲ್ ಮೈಲುಗಳಷ್ಟು ದೂರ ಕ್ರಮಿಸಿದ ನಂತರ, ಇಂಡಿಗೊ ಏರ್‌ಲೈನ್ಸ್ ವಿಮಾನ ಸಂಖ್ಯೆ 6E-7295ರಲ್ಲಿ ತಾಂತ್ರಿಕ ದೋಷ ಇರುವುದು ಪೈಲಟ್‌ ಅವರ ಗಮನಕ್ಕೆ ಬಂದಿದೆ ಎಂದು ಇಂದೋರ್‌ನ ದೇವಿ ಅಹಲ್ಯಾಬಾಯಿ ಹೋಳ್ಕರ್ ವಿಮಾನ ನಿಲ್ದಾಣದ ನಿರ್ದೇಶಕಿ ವಿಪಿಂಕಾಂತ್ ಸೇಠ್ ತಿಳಿಸಿದ್ದಾರೆ.

ಮಂಗಳವಾರ ಬೆಳಿಗ್ಗೆ 6.35ರ ಸುಮಾರಿಗೆ ಇಂದೋರ್ ವಿಮಾನ ನಿಲ್ದಾಣದಿಂದ ವಿಮಾನ ಹೊರಟಿತು. ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ, ಪೈಲಟ್ ವಾಯು ಸಂಚಾರ ನಿಯಂತ್ರಣ (ಎಟಿಸಿ) ಘಟಕಕ್ಕೆ ಮಾಹಿತಿ ನೀಡಿದರು. ತಾಂತ್ರಿಕ ಕಾರಣಗಳಿಂದ ವಿಮಾನ ವಾಪಸ್‌ ಆಗಿದೆ ಎಂದು ಅವರು ಹೇಳಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version