Home ಆರೋಗ್ಯ ಪ್ರತಿನಿತ್ಯ ವಾಲ್ ನಟ್ಸ್ ತಿಂದ್ರೆ ಆರೋಗ್ಯಕ್ಕೇನು ಲಾಭ?

ಪ್ರತಿನಿತ್ಯ ವಾಲ್ ನಟ್ಸ್ ತಿಂದ್ರೆ ಆರೋಗ್ಯಕ್ಕೇನು ಲಾಭ?

ವಾಲ್ ನಟ್ಸ್ ಒಣ ಹಣ್ಣುಗಳಲ್ಲಿ ಒಂದಾಗಿದೆ. ಇದು ದುಬಾರಿಯಾಗಿದ್ದರು ಕೂಡ ಆರೋಗ್ಯದ ವಿಷಯದಲ್ಲಿ ಬಹಳ ಒಳ್ಳೆಯದು. ಅಪಾರ ಪ್ರಮಾಣದ ಪೌಷ್ಟಿಕ ಸತ್ವವನ್ನು ಹೊಂದಿರುವ ವಾಲ್ ನಟ್ಸ್ ಸೂಪರ್ ಫುಡ್ ಆಗಿದೆ. ವಾಲ್ ನಟ್ಸ್ ನಿಮ್ಮ ಹೃದಯ ಮತ್ತು ಮೆದುಳಿಗೆ ಬಹಳ ಒಳ್ಳೆಯದು.

ವಾಲ್ ನಟ್ಸ್ ನಲ್ಲಿ ಅಪಾರ ಪ್ರಮಾಣದ ಮೊನೊಸಾಚುರೇಟೆಡ್ ಮತ್ತು ಬಹುಅಪರ್ಯಾಪ್ತ ಕೊಬ್ಬಿನಾಮ್ಲಗಳಿವೆ. ಇದು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನಗಳು ತಿಳಿಸುತ್ತದೆ.
ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾದಂತೆ ಸಹಜವಾಗಿಯೇ ಹೃದಯರಕ್ತನಾಳದ ಕಾಯಿಲೆ ಮತ್ತು ಪಾರ್ಶ್ವವಾಯು ಸಮಸ್ಯೆಗಳಿಂದ ಪಾರಾಗಬಹುದು. ಹಾಗಾಗಿ ಪ್ರತಿನಿತ್ಯ ನಿಯಮಿತವಾಗಿ ವಾಲ್ ನಟ್ಸ್ ಸೇವನೆ ಮಾಡುವುದು ಒಳ್ಳೆಯದು.


ವಾಲ್ ನಟ್ಸ್ ಫೈಟೊಕೆಮಿಕಲ್ಗಳನ್ನು ಒಳಗೊಂಡಿರುತ್ತವೆ. ಜೊತೆಗೆ ಹೆಚ್ಚಿನ ಪ್ರಮಾಣದ ಬಹು ಅಪರ್ಯಾಪ್ತ ಕೊಬ್ಬುಗಳನ್ನು ಕೂಡ ಹೊಂದಿದೆ. ಈ ಕಾರಣದಿಂದ ನಮ್ಮ ಮೆದುಳಿನ ಆರೋಗ್ಯ ಮತ್ತು ಕಾರ್ಯ ಎರಡಕ್ಕೂ ಹೆಚ್ಚು ಪ್ರಯೋಜನಗಳನ್ನು ನೀಡುತ್ತದೆ.


ಇದರಲ್ಲಿರುವ ಒಮೆಗಾ 3 ಕೊಬ್ಬಿನಾಮ್ಲಗಳು ಮೆದುಳಿನಲ್ಲಿನ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮೆದುಳಿನ ಅನೇಕ ತೊಂದರೆಗಳನ್ನು ಕೂಡ ಇದು ನಿಧಾನವಾಗಿ ಕಡಿಮೆ ಮಾಡುತ್ತದೆ. ಹಾಗಾಗಿ ಪ್ರತಿನಿತ್ಯ ನಿಯಮಿತವಾಗಿ ವಾಲ್ ನಟ್ಸ್ ಗಳನ್ನು ಸೇವನೆ ಮಾಡಿ.


ನೀವು ತೂಕ ಇಳಿಸಿಕೊಳ್ಳುವ ಹಾದಿಯಲ್ಲಿದ್ದರೆ ವಾಲ್ ನಟ್ಸ್ ನಿಮಗೆ ಸಹಾಯ ಮಾಡುತ್ತದೆ. ಪ್ರತಿನಿತ್ಯ 7 ರಿಂದ 8 ವಾಲ್ ನಟ್ಸ್ಗಳನ್ನು ತಿಂದು ನೀರು ಕುಡಿಯಬಹುದು. ಇದರಿಂದ ನಿಮಗೆ ಹೊಟ್ಟೆ ತುಂಬಿದ ಅನುಭವ ಉಂಟಾಗುವುದರ ಜೊತೆಗೆ ಹೆಚ್ಚು ಕ್ಯಾಲೋರಿ ಸೇವನೆ ಮಾಡುವುದನ್ನು ತಪ್ಪಿಸುತ್ತೀರಿ.


ವಾಲ್ ನಟ್ಸ್ ಗಳಲ್ಲಿ ಒಮೆಗಾ 3 ಕೊಬ್ಬಿನಾಮ್ಲಗಳು, ಪ್ರೋಟೀನ್, ಉತ್ಕರ್ಷಣ ನಿರೋಧಕಗಳು, ಮೆಗ್ನೀಸಿಯಮ್, ತಾಮ್ರ, ವಿಟಮಿನ್ ಎ, ಡಿ ಯನ್ನು ಸಮೃದ್ಧವಾಗಿದೆ ಹೊಂದಿದೆ. ಇದು ನಿಮ್ಮ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.


ಯಾರೆಲ್ಲಾ ಅಧಿಕ ರಕ್ತದೊತ್ತಡವನ್ನು ಹೊಂದಿರುತ್ತಾರೆಯೋ ಅವರೆಲ್ಲಾ ಪ್ರತಿನಿತ್ಯ ವಾಲ್ ನಟ್ಸ್ ಗಳನ್ನು ಸೇವನೆ ಮಾಡಿ. ಗರ್ಭಾವಸ್ಥೆಯಲ್ಲಿ ವಾಲ್ ನಟ್ಸ್ ಸೇವನೆ ಮಾಡುವುದು ಬಹಳ ಒಳ್ಳೆಯದು.

Join Whatsapp
Exit mobile version