Home ಆರೋಗ್ಯ ಸೀತಾಫಲ ತಿನ್ನುವುದರಿಂದ ಸಿಗುವ ಆರೋಗ್ಯಕರ ಲಾಭಗಳೇನು ಗೊತ್ತಾ?

ಸೀತಾಫಲ ತಿನ್ನುವುದರಿಂದ ಸಿಗುವ ಆರೋಗ್ಯಕರ ಲಾಭಗಳೇನು ಗೊತ್ತಾ?

ಸೀತಾಫಲವು ನಮ್ಮ ದೇಹಕ್ಕೆ ನಾನಾ ರೀತಿಯ ಪ್ರಯೋಜನಗಳನ್ನು ನೀಡುತ್ತದೆ. ನಮ್ಮ ಮನೆಯ ತೋಟಗಳಲ್ಲಿಯೂ ಈ ಮರವನ್ನು ಬೆಳೆಸಬಹುದಾದರೂ, ಅನೇಕ ಮಂದಿಗೆ ಈ ಹಣ್ಣಿನ ಬಗ್ಗೆ ತಿಳಿದಿಲ್ಲ.

ಹಣ್ಣಿನ ಅಂಗಡಿಯಲ್ಲಿ ಇದನ್ನು ನೋಡಿದ್ದರೂ ಸಹ, ಇದರ ರುಚಿ ಹೇಗಿರುತ್ತದೆಯೋ ಎಂಬ ಅನುಮಾನದಿಂದ ಈ ಹಣ್ಣನ್ನು ಖರೀದಿಸುವುದಿಲ್ಲ. ಸೀತಾಫಲ ನೋಡಲು ಮುಳ್ಳಿನಂತೆ ಕಾಣಿಸುತ್ತದೆ.

ಈ ಹಣ್ಣಿನಲ್ಲಿ ವಿಟಮಿನ್ ಸಿ, ವಿಟಮಿನ್ ಬಿ 6, ಕ್ಯಾಲ್ಸಿಯಂ, ಕಬ್ಬಿಣ ಮತ್ತು ಆಂಟಿಆಕ್ಸಿಡೆಂಟ್ಗಳಿವೆ. ಇದರಲ್ಲಿ ಫೈಬರ್ ಕೂಡ ಸಮೃದ್ಧವಾಗಿದೆ.


ಅಲ್ಸರ್ ಗೆ ಒಳ್ಳೆಯದು: ದೀರ್ಘಕಾಲದ ಹುಣ್ಣುಗಳಿಂದ ಬಳಲುತ್ತಿರುವವರು ಸೀತಾಫಲ ತಿಂದರೆ ಬೇಗ ಗುಣಮುಖರಾಗುತ್ತಾರೆ. ಅದೇ ರೀತಿ ಅಸಿಡಿಟಿ ಸಮಸ್ಯೆ ಇರುವವರು ಕೂಡ ಈ ಹಣ್ಣನ್ನು ತಿನ್ನಬಹುದು. ಸೀತಾಫಲ ನಮ್ಮ ದೇಹದಲ್ಲಿ ಚಯಾಪಚಯ ಕ್ರಿಯೆಗಳನ್ನು ಉತ್ತೇಜಿಸುತ್ತದೆ. ಇದು ನಮ್ಮ ಆಹಾರವನ್ನು ಶಕ್ತಿಯನ್ನಾಗಿ ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿದೆ.


ಕಣ್ಣು ಮತ್ತು ಹೃದಯಕ್ಕೆ ಒಳ್ಳೆಯದು: ಸೀತಾಪಳ ತಿನ್ನುವುದರಿಂದ ದೃಷ್ಟಿ ಸುಧಾರಿಸುತ್ತದೆ. ಹೃದಯದ ಆರೋಗ್ಯ ಮತ್ತು ಮೆದುಳಿನ ಆರೋಗ್ಯಕ್ಕೂ ಉತ್ತಮವಾಗಿದೆ. ಸೀತಾಫಲ ಹಣ್ಣಿನಲ್ಲಿ ಮೈಕ್ರೊನ್ಯೂಟ್ರಿಯೆಂಟ್ಗಳು ಹೇರಳವಾಗಿದ್ದು, ತ್ವಚೆಯ ಅಂದವನ್ನು ಹೆಚ್ಚಿಸುತ್ತದೆ. ಚಿಕ್ಕ ವಯಸ್ಸಿನಲ್ಲೇ ಕಣ್ಣಿನ ಸಮಸ್ಯೆ ಇರುವ ಮಕ್ಕಳಿಗೆ ಈ ಹಣ್ಣನ್ನು ನೀಡಬಹುದು.


ಹಿಮೋಗ್ಲೋಬಿನ್ ಮಟ್ಟವನ್ನು ಸುಧಾರಿಸುತ್ತದೆ: ಸೀತಾಫಲ ನಮ್ಮ ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ರಕ್ತಹೀನತೆ ಇರುವವರು ಮತ್ತು ಗರ್ಭಾವಸ್ಥೆಯಲ್ಲಿ ಹಿಮೋಗ್ಲೋಬಿನ್ ಕೊರತೆಯನ್ನು ಎದುರಿಸುವ ಮಹಿಳೆಯರು ಈ ಸೀತಾಫಲವನ್ನು ತಿನ್ನಬಹುದು.


ದೀರ್ಘಕಾಲದ ಕಾಯಿಲೆಗಳನ್ನು ತಡೆಯುತ್ತದೆ:
ಸೀತಾಫಲ ಹಣ್ಣಿನಲ್ಲಿ ರೋಗನಿರೋಧಕ ಶಕ್ತಿ ಹೆಚ್ಚು. ಇದು ಬೊಜ್ಜನ್ನು ತಡೆಗಟ್ಟುತ್ತದೆ. ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿಡುತ್ತದೆ. ಈ ಹಣ್ಣು ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿದೆ. ಜೀರ್ಣಕಾರಿ ಸಮಸ್ಯೆಗಳನ್ನು ಎದುರಿಸುತ್ತಿರುವವರು ಸೀತಾಫಲ ಹಣ್ಣನ್ನು ತಿನ್ನುವುದರಿಂದ ಪರಿಹಾರವನ್ನು ಪಡೆಯಬಹುದು.

Join Whatsapp
Exit mobile version