Home ಟಾಪ್ ಸುದ್ದಿಗಳು ಬಿಜೆಪಿ ನೇತೃತ್ವದ NDA ಒಕ್ಕೂಟದಿಂದ ಹೊರಬಂದಿದ್ದೇವೆ: ಪಶುಪತಿ ಪಾರಸ್

ಬಿಜೆಪಿ ನೇತೃತ್ವದ NDA ಒಕ್ಕೂಟದಿಂದ ಹೊರಬಂದಿದ್ದೇವೆ: ಪಶುಪತಿ ಪಾರಸ್

0

ಪಟ್ನಾ: ಬಿಜೆಪಿ ನೇತೃತ್ವದ ಎನ್‌ ಡಿಎ ಒಕ್ಕೂಟದಿಂದ ನಮ್ಮ ಪಕ್ಷ ಹೊರಬಂದಿರುವುದಾಗಿ ರಾಷ್ಟ್ರೀಯ ಲೋಕ ಜನಶಕ್ತಿ ಪಕ್ಷದ(ಆರ್‌ಎಲ್‌ಜೆಪಿ) ಪಕ್ಷದ ವರಿಷ್ಠ, ಮಾಜಿ ಕೇಂದ್ರ ಸಚಿವ ಪಶುಪತಿ ಕುಮಾರ್ ಪಾರಸ್ ಹೇಳಿದ್ದಾರೆ.

ತಮ್ಮ ದಿವಂಗತ ಸಹೋದರ ರಾಮ್ ವಿಲಾಸ್ ಪಾಸ್ವಾನ್ ಕಟ್ಟಿದ್ದ ಲೋಕ ಜನಶಕ್ತಿ ಪಕ್ಷದಿಂದ ಹೊರಬಂದು ಪಾರಸ್, 2021ರಲ್ಲಿ ಹೊಸ ಪಕ್ಷ ಕಟ್ಟಿದ್ದರು. ಅಣ್ಣ ಮಗ ಚಿರಾಗ್ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಪಕ್ಷ ಎನ್‌ ಡಿಎಯಲ್ಲಿ ಗುರುತಿಸಿಕೊಂಡಿದೆ.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿರುವ ಅವರು, ರಾಮ್ ವಿಲಾಸ್ ಪಾಸ್ವಾನ್ ಅವರನ್ನು ಎರಡನೇ ಅಂಬೇಡ್ಕರ್ ಎಂದು ಬಣ್ಣಿಸಿರುವ ಪಶುಪತಿ ಪಾರಸ್, ಪಾಸ್ವಾನ್ ಅವರಿಗೆ ಭಾರತರತ್ನ ನೀಡಬೇಕೆಂದು ಒತ್ತಾಯಿಸಿದ್ದಾರೆ.

2014ರಿಂದ ನಾನು ಎನ್‌ ಡಿಎಯಲ್ಲಿದ್ದೆ. ಇನ್ನುಮುಂದೆ, ನಮ್ಮ ಪಕ್ಷಕ್ಕೂ ಎನ್‌ಡಿಎಗೂ ಯಾವುದೇ ಸಂಬಂಧವಿಲ್ಲ ಎಂದು ಘೋಷಿಸುತ್ತಿದ್ದೇನೆ ಎಂದು ಪಾರಸ್ ಹೇಳಿದ್ದಾರೆ.

ಎನ್‌ ಡಿಎ ಮೈತ್ರಿಯಿಂದ ಹೊರಬಂದಿದ್ದರೂ ರಾಷ್ಟ್ರೀಯ ಅಧ್ಯಕ್ಷ ಜೆ,ಪಿ. ನಡ್ಡಾ ಜೊತೆ ಮಾತುಕತೆ ನಡೆಸುವ ಮೂಲಕ ಬದಲಾವಣೆ ನಿರೀಕ್ಷಿಸಿದ್ದರು ಎಂದು ವರದಿ ತಿಳಿಸಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version