Home ಟಾಪ್ ಸುದ್ದಿಗಳು ನಾವು ಹಿಂದುತ್ವವಾದಿಗಳು, AIMIM ಜೊತೆ ಎಂದಿಗೂ ಮೈತ್ರಿ ಮಾಡುವುದಿಲ್ಲ: ಉದ್ಧವ್ ಠಾಕ್ರೆ

ನಾವು ಹಿಂದುತ್ವವಾದಿಗಳು, AIMIM ಜೊತೆ ಎಂದಿಗೂ ಮೈತ್ರಿ ಮಾಡುವುದಿಲ್ಲ: ಉದ್ಧವ್ ಠಾಕ್ರೆ

ಪುಣೆ: ಶಿವಸೇನೆ ಪಕ್ಷವು ತನ್ನ ಮೂಲ ಸಿದ್ದಾಂತವಾದ ಹಿಂದುತ್ವಕ್ಕೆ ಬದ್ಧವಾಗಿದ್ದು, ಹಿಂದುತ್ವವಾದಿಗಳಾದ ನಾವು ಎಂದಿಗೂ AIMIM ಪಕ್ಷಗಳೊಂದಿಗೆ ಮೈತ್ರಿ ಮಾಡುವುದಿಲ್ಲ ಎಂದು ಶಿವಸೇನೆ ಮುಖಂಡ, ಮಹಾರಾಷ್ಟ್ರ ಉದ್ಧವ್ ಠಾಕ್ರೆ ತಿಳಿಸಿದ್ದಾರೆ.

AIMIM ಪಕ್ಷವು ಆಡಳಿತಾರೂಡ ಮಹಾರಾಷ್ಟ್ರ ವಿಕಾಸ್ ಅಘಾಡಿ (ಎಂವಿಎ ) ಸರ್ಕಾರದೊಂದಿಗೆ ಕೈ ಜೋಡಿಸಲು ಸಿದ್ಧವಿರುವುದಾಗಿ ಘೋಷಿಸಿದ ಒಂದು ದಿನದ ನಂತರ ಉದ್ಧವ್ ಠಾಕ್ರೆ ಅವರಿಂದ ಈ ಹೇಳಿಕೆ ಹೊರಬಿದ್ದಿದೆ.
ಈ ಮಧ್ಯೆ AIMIM ಪಕ್ಷದೊಂದಿಗಿನ ಮೈತ್ರಿ ಪ್ರಸ್ತಾಪವನ್ನು ‘ಬಿಜೆಪಿಯ ಪಿತೂರಿ’ ಎಂದು ಠಾಕ್ರೆ ಬಣ್ಣಿಸಿದ್ದಾರೆ.

ಶಿವಸೇನೆ ಪಕ್ಷವು ಪ್ರತಿಪಾದಿಸುವ ಹಿಂದುತ್ವವನ್ನು ಅನುಮಾನಿಸುವವರನ್ನು ನಾಶಗೊಳಿಸುವಂತೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಪಕ್ಷದ ಮುಖಂಡರಿಗೆ ಸೂಚಿಸಿದ್ದಾರೆ ಎಂದು ಸಂಸದ ಸಂಜಯ್ ರಾವತ್ ತಿಳಿಸಿದ್ದಾರೆ.

ಶಿವಸೇನೆಯು ಕಟ್ಟರ್ ಹಿಂದುತ್ವವಾದಿ ಪಕ್ಷವಾಗಿದ್ದು, ಅದು ಹಿಂದುತ್ವವಾದಿಯಾಗಿಯೇ ಉಳಿಯ ಬಯಸುತ್ತದೆ. ಶಿವಸೇನೆಯು ಹಿಂದುತ್ವದೊಂದಿಗೆ ಎಂದಿಗೂ ಹೊಂದಾಣಿಕೆ ಮಾಡಿಲ್ಲ ಎಂದು ಠಾಕ್ರೆ ಪ್ರತಿಕ್ರಿಯಿಸಿದ್ದಾರೆ.

ಶಿವಸೇನೆ ಮುಸ್ಲಿಮರ ಪರವಾಗಿದೆ ಎಂದು ಹೇಳಿಕೆ ನೀಡಿದ್ದ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಉದ್ಧವ್ ಠಾಕ್ರೆ, ಅಫ್ಝಲ್ ಗುರುವನ್ನು ಗಲ್ಲಿಗೇರಿಸಲು ಒಪ್ಪದ ಮೆಹಬೂಬ ಮುಫ್ತಿಯೊಂದಿಗೆ ಮೈತ್ರಿ ಮಾಡಿದ ಬಿಜೆಪಿಯಂತೆ ಶಿವಸೇನೆಯು ಹಿಂದುತ್ವದೊಂದಿಗೆ ಹೊಂದಾಣಿಕೆ ಮಾಡುವ ನೀಚ ಮಟ್ಟಕ್ಕೆ ಶಿವಸೇನೆಯು ಎಂದಿಗೂ ಇಳಿಯುವುದಿಲ್ಲ ಎಂದು ಕಿಡಿಕಾರಿದ್ದಾರೆ.

ಇತ್ತೀಚೆಗೆ ನಡೆದ ಮಹತ್ವದ ಬೆಳವಣಿಗೆಯೊಂದರಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಎಂವಿಎ ಒಕ್ಕೂಟದ ಜೊತೆ ಮೈತ್ರಿ ಮಾಡಿಕೊಳ್ಳುವುದಾಗಿ AIMIM ಸಂಸದ ಇಂತಿಯಾಝ್ ಜಲೀಲ್ ತಿಳಿಸಿದ್ದರು.

Join Whatsapp
Exit mobile version