Home ಕ್ರೀಡೆ ಭಾರತೀಯ ಟೆಸ್ಟ್ ತಂಡದ ನಾಯಕತ್ವವನ್ನು ತ್ಯಜಿಸಿದ ವಿರಾಟ್ ಕೊಹ್ಲಿ

ಭಾರತೀಯ ಟೆಸ್ಟ್ ತಂಡದ ನಾಯಕತ್ವವನ್ನು ತ್ಯಜಿಸಿದ ವಿರಾಟ್ ಕೊಹ್ಲಿ

ಹೊಸದಿಲ್ಲಿ: ಭಾರತೀಯ ಕ್ರಿಕೆಟ್ ತಂಡದ ಯಶಸ್ವೀ ನಾಯಕರಲ್ಲೊಬ್ಬರಾಗಿದ್ದ ವಿರಾಟ್ ಕೊಹ್ಲಿ ಇದೀಗ ಟೆಸ್ಟ್ ತಂಡದ ನಾಯಕತ್ವಕ್ಕೂ ರಾಜೀನಾಮೆ ನೀಡಿದ್ದಾರೆ. ಮೂರು ತಿಂಗಳ ಹಿಂದಷ್ಟೇ ಟಿ-20 ಹಾಗೂ ಏಕದಿನ ಕ್ರಿಕೆಟ್ ನಾಯಕತ್ವವನ್ನು ತ್ಯಜಿಸಿದ್ದರು. ಇದೀಗ ಟೆಸ್ಟ್ ನಾಯಕತ್ವಕ್ಕೂ ಗುಡ್ ಬೈ ಹೇಳಿದ್ದಾರೆ.  ಈ ಮೂಲಕ ಕೊಹ್ಲಿ ಎಲ್ಲ ಮೂರು ಮಾದರಿಯ ಕ್ರಿಕೆಟ್‌ನ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಭಾರತೀಯ ಕ್ರಿಕೆಟ್ ತಂಡ ದಕ್ಷಿಣಾ ಅಫ್ರಿಕಾ ಪ್ರವಾಸದಲ್ಲಿ ಟೆಸ್ಟ್ ಸರಣಿಯಲ್ಲಿ ಸೋಲನ್ನಪ್ಪಿದ ಬಳಿಕ ಕೊಹ್ಲಿ ತನ್ನ ಅಚ್ಚರಿಯ ನಿರ್ಧಾರ ಪ್ರಕಟಿಸಿದ್ದಾರೆ  

ಅಝರುದ್ದೀನ್, ಧೋನಿ ಬಳಿಕ ಭಾರತೀಯ ಕ್ರಿಕೆಟ್ ತಂಡದ ಯಶಸ್ವೀ ನಾಯಕರಾಗಿ ಗುರುತಿಸಿಕೊಂಡಿದ್ದ ಕೊಹ್ಲಿ ಇತ್ತೀಚೆಗೆ ತಂಡದ ಸಹಪಾಠಿಯಾಗಿದ್ದ  ಮುಹಮ್ಮದ್ ಶಮಿಯವರ ಬಗ್ಗೆ ಬಲಪಂಥೀಯ ಹಿಂದುತ್ವ ಪಡೆ ಟ್ರೋಲ್ ದಾಳಿ ನಡೆಸಿತ್ತು.  ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಭಾರತ ಸೋಲನ್ನಪ್ಪಿದಾಗ  ಹಿಂದುತ್ವ ಟ್ರೋಲ್ ಪಡೆ ಮುಹಮ್ಮದ್ ಶಮಿಯನ್ನು ಗುರಿಪಡಿಸಿದ್ದವು.  ಕೊಹ್ಲಿ ಇದನ್ನು ಸಮರ್ಥವಾಗಿ ಎದುರು ಹಾಕಿಕೊಂಡಿದ್ದರು ಮಾತ್ರವಲ್ಲ ಶಮಿ ಪರ ನಿಂತು ಬಹಿರಂಗವಾಗಿ ಬೆಂಬಲ ವ್ಯಕ್ತಪಡಿಸಿದ್ದರು.

ಆ ಬಳಿಕ ಕೊಹ್ಲಿಯನ್ನು ಹಂತ ಹಂತವಾಗಿ ಗುರಿಪಡಿಸುತ್ತಲೇ ಬಂದ ಗೃಹ ಮಂತ್ರಿ ಅಮಿತ್ ಶಾ ಅವರ ಮಗ ಜೈ ಶಾ ನೇತೃತ್ವ ವಹಿಸಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ, ಕೊಹ್ಲಿ ಅವರನ್ನು ಟಿ-20 ಮತ್ತು ಏಕದಿನ ನಾಯಕತ್ವದಿಂದ ಸಲೀಸಾಗಿ ಹೊರಹೋಗುವಂತೆ ಮಾಡಿತ್ತು. ಆ ಬಳಿಕ ದಕ್ಷಿಣ ಆಫ್ರಿಕಾ ಪ್ರವಾಸದ ಏಕದಿನ ತಂಡದಲ್ಲಿ ಸ್ಥಾನ ಪಡೆಯುವ ಬಗ್ಗೆಯೂ ತಕರಾರು ಹುಟ್ಟಿಕೊಂಡಿತ್ತು. ಇದೀಗ ಕೊಹ್ಲಿ ಟೆಸ್ಟ್ ನಾಯಕತ್ವಕ್ಕೂ ರಾಜೀನಾಮೆ ನೀಡಿದ್ದು, ಓರ್ವ ಯಶಸ್ವೀ ನಾಯಕನ ಕ್ರಿಕೆಟ್ ಬದುಕಿನ ದುರಂತವಾಗಿದೆ.

ಕೊಹ್ಲಿ ತನ್ನ ಟ್ವಿಟ್ಟರ್ ನಲ್ಲಿ ಈ ನಿರ್ಧಾರವನ್ನು ತಿಳಿಸಿದ್ದಾರೆ.

Join Whatsapp
Exit mobile version