Home ಟಾಪ್ ಸುದ್ದಿಗಳು ಯಮನ್ ಹೌಥಿ ಬಂಡುಕೋರರ ವಶದಲ್ಲಿರುವ ಯುಎಇ ಹಡಗನ್ನು ಬಿಡುಗಡೆಗೊಳಿಸುವಂತೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಒತ್ತಾಯ

ಯಮನ್ ಹೌಥಿ ಬಂಡುಕೋರರ ವಶದಲ್ಲಿರುವ ಯುಎಇ ಹಡಗನ್ನು ಬಿಡುಗಡೆಗೊಳಿಸುವಂತೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಒತ್ತಾಯ

ನ್ಯೂಯಾರ್ಕ್: ಯುಎಇ ಮೂಲದ ನೌಕಾ ಹಡಗನ್ನು ತಮ್ಮ ವಶದಲ್ಲಿರಿಸಿರುವ ಯಮನ್ ಹೌಥಿ ಬಂಡುಕೋರರ ನಡೆಯನ್ನು ಖಂಡಿಸಿರುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿ, ತಕ್ಷಣ ಬಿಡುಗಡೆಗೊಳಿಸುವಂತೆ ಒತ್ತಾಯಿಸಿದೆ.

ಯಮೆನ್ ನ ಹೊದೈದಾ ಬಂದರಿನಿಂದ ಇರಾನ್ ಬೆಂಬಲಿತ ಮತ್ತು ಪೂರ್ವಯೋಜಿತ ಕಾರ್ಯಾಚರಣೆಯಲ್ಲಿ ಹೌಥಿ ಬಂಡುಕೋರರು ಸರಕು ತುಂಬಿದ ಹಡಗನ್ನು ವಶಪಡಿಸಿಕೊಂಡಿದೆ ಎಂದು ಯಮೆನ್ ಒಕ್ಕೂಟ ತಿಳಿಸಿತ್ತು.

ಈ ಮಧ್ಯೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸದಸ್ಯ ರಾಷ್ಟ್ರಗಳು “ಸಮಸ್ಯೆಯನ್ನು ತ್ವರಿತವಾಗಿ ಬಗೆಹರಿಸಲು ಮತ್ತು ಅಂತಾರಾಷ್ಟ್ರೀಯ ಕಾನೂನಿಗೆ ಅನುಸಾರವಾಗಿ ಅಡೆನ್ ಮತ್ತು ಕೆಂಪು ಸಮುದ್ರದ ಕೊಲ್ಲಿಯಲ್ಲಿ ನ್ಯಾವಿಗೇಷನ್ ಸ್ವಾತಂತ್ರ್ಯದ ಪ್ರಾಮುಖ್ಯತೆಯನ್ನು ಒತ್ತಿಹೇಳಲು ಕರೆ ನೀಡಿದೆ.

Join Whatsapp
Exit mobile version