ವಾಷಿಂಗ್ಟನ್: ಜೆನೊಸೈಡ್ ವಾಚ್ ಮತ್ತು ಅಮೆರಿಕಾದ 17 ಮಾನವ ಹಕ್ಕು ಸಂಘಟನೆಗಳ ಸಹಿತ ಅಮ್ನೆಸ್ಟಿ ಇಂಟರ್ ನ್ಯಾಶನಲ್ ಪತ್ರಿಕೆ ಕೂಡಾ ಭಾರತೀಯ ಅಲ್ಪಸಂಖ್ಯಾತ ಮುಸ್ಲಿಮರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿವೆ. ಇತ್ತೀಚೆಗೆ ಹರಿದ್ವಾರದಲ್ಲಿ ನಡೆದ ಕಾರ್ಯಕ್ರಮವವೊಮದರಲ್ಲಿ ಬಿಜೆಪಿ ನಾಯಕರು ಮುಸ್ಲಿಮ್ ಸಮುದಾಯದ ನರಮೇಧಕ್ಕೆ ಕರೆ ನೀಡಿದ್ದನ್ನು ಈ ಸಂಘಟನೆಗಳು ಗಂಭೀರವಾಗಿ ಪರಿಗಣಿಸಿವೆ.
“ಮುಸ್ಲಿಮರ ಹತ್ಯಾಕಾಂಡಕ್ಕೆ ಕರೆನೀಡಿ ನಡೆಸಿದ ದ್ವೇಷ ಭಾಷಣವನ್ನು ಪ್ರಧಾನಿ ನರೇಂದ್ರ ಮೋದಿ ಖಂಡಿಸಬೇಕಿತ್ತು.ಆದರೆ ಅವರು ತುಟಿ ಪಿಟಿಕ್ ಎನ್ನಲಿಲ್ಲ” ಎಂದು ಜೆನೊಸೈಡ್ ವಾಚ್ ನ ಅಧ್ಯಕ್ಷ ಡಾ. ಗ್ರೆಗರಿ ಸ್ಟಂಟನ್ ಹೇಳಿದ್ದಾರೆ.
ಹತ್ಯಾಕಾಂಡದ ಹಲವು ಪ್ರಕ್ರಿಯೆಗಳು “ಜನರನ್ನು ಪೌರತ್ವದಿಂದ ಹೊರಗಿಡಲು ಪ್ರಯತ್ನಿಸುವ ಮೂಲಕ” ಪ್ರಾರಂಭವಾಗುತ್ತದೆ. ಭಾರತ ಸರ್ಕಾರವು ಮುಸ್ಲಿಮರ ವಿರುದ್ಧ ಭಯೋತ್ಪಾದಕರು, ಪ್ರತ್ಯೇಕತಾವಾದಿಗಳು, ಅಪರಾಧಿಗಳು ಮುಂತಾದ ಅನಿಷ್ಟ ಭಾಷಾ ಪ್ರಯೋಗವನ್ನು ನಡೆಸುತ್ತಿದೆ. ಈ ಧ್ರುವೀಕರಣವು ಎಲ್ಲಾ ಮುಸ್ಲಿಮರ ಅಸಹನೆಗೆ ಕಾರಣವಾಗುತ್ತದೆ. ಹತ್ಯಾಕಾಂಡದ ತಯಾರಿಯನ್ನು ನಾವು ನೋಡುತ್ತಿದ್ದೇವೆ ಎಂದು ಅವರು ಹೇಳಿದರು.
ಭಾರತವು ವಿಶ್ವದಲ್ಲಿಯೇ ಹತ್ಯಾಕಾಂಡದ ಅಪಾಯ ಎದುರಿಸುತ್ತಿರುವ ಎರಡನೆ ದೇಶವಾಗಿದೆ ಎಂದು ಯು ಎಸ್ ಹೋಲೋಕಾಸ್ಟ್ ಮೆಮೋರಿಯಲ್ ಮ್ಯೂಸಿಯಂ ನ ಸಂಶೋಧನೆಗಳಿಂದ ತಿಳಿದು ಬಂದಿದೆ. 2002 ರ ಗುಜರಾತ್ ಹಿಂಸಾಚಾರ ಮತ್ತು ಇತ್ತೀಚ್ಗೆ ಮುಸ್ಲಿಂ ಮಹಿಳೆಯರನ್ನು ಆನ್ಲೈನ್ ನಲ್ಲಿ ಹರಾಜಿಗಿಟ್ಟ ಬುಲ್ಲಿಬಾಯ್ ಆ್ಯಪ್ ಪ್ರಕರಣದ ಬಗ್ಗೆ ಸಂಘಟನೆಗಳ ಸಭೆಯಲ್ಲಿ ಚರ್ಚೆ ನಡೆದಿದೆ. ಭಾರತದಲ್ಲಿ ವ್ಯಕ್ತವಾಗುತ್ತಿರುವ ದ್ವೇಷ ಗಂಭೀರ ಮಟ್ಟದ್ದಾಗಿದೆ ಎಂದು ಸಂಘಟನೆಗಳು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿವೆ.