Home Uncategorized ವೀರಾಜಪೇಟೆ: ಸರ್ವೋದಯ ಶಿಕ್ಷಣ ಮಹಾವಿದ್ಯಾಲಯ ರಾಷ್ಟ್ರಯ ಯುವ ದಿನಾಚರಣೆ

ವೀರಾಜಪೇಟೆ: ಸರ್ವೋದಯ ಶಿಕ್ಷಣ ಮಹಾವಿದ್ಯಾಲಯ ರಾಷ್ಟ್ರಯ ಯುವ ದಿನಾಚರಣೆ

ವೀರಾಜಪೇಟೆ: ಸರ್ವೋದಯ ಶಿಕ್ಷಣ ಮಹಾವಿದ್ಯಾಲಯ ಹಾಗೂ ವಿವೇಕ ಜಾಗೃತ ಬಳಗ ವಿರಾಜಪೇಟೆ  ಇವರ  ಜಂಟಿ ಸಹಭಾಗಿತ್ವದಲ್ಲಿ ಸ್ವಾಮಿ ವಿವೇಕಾನಂದರ 159ನೇ ಜನ್ಮದಿನಾಚರಣೆ ಅಂಗವಾಗಿ ರಾಷ್ಟ್ರಯ ಯುವ ದಿನಾಚರಣೆ ಪ್ರಯುಕ್ತ “ವಿವೇಕಾನಂದರ ವಿಶ್ವ ಮಾನವೀಯತೆಯ ಹಾಗೂ ರಾಷ್ಟçಪ್ರೇಮದ ವಿಚಾರವಾಗಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ವೀವೆಕನಂದರ ಚಿಂತನೆಗಳು ಬಗ್ಗೆ ಕಾರ್ಯಗಾರ ಏರ್ಪಡಿಸಲಾಗಿತ್ತು

ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ  ಅಗಮೀಸಿ ಮಾತನಾಡಿದ ದೇವಣಗೇರಿ ಬಿ.ಸಿ.ಪ್ರೌಢಶಾಲೆ ಮುಖ್ಯ ಶಿಕ್ಷಕರಾದ  ಹೆಚ್.ಡಿ.ಲೋಕೆಶ್, ಉದಾತ್ತ ಚಿಂತಕರಾಗಿ,ವೀರಸೆನಾನಿಯಾಗಿ,ದೇಶಪ್ರಮಿಯಾಗಿ ವೀವೆಕನಂದರು ಯುವ ಜನತೆಗೆ ಸದಾ ದಾರಿ ದೀಪ ಎಂದು  ಹೇಳಿದ್ದರು.

 ಸರ್ವೋದಯ ಶಿಕ್ಷಣ ಮಹಾವಿದ್ಯಾಲಯದ  ಶರತ್ ಚಂದ್ರ ಸ್ಮಾರಕ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆ   ವಹಿಸಿ ಮಾತನಾಡಿದ ಕಾಲೇಜಿನ ಪ್ರಂಶುಪಾಲರಾದ ಡಾ.ವಾಣಿ, ಭಾವೀ ಶಿಕ್ಷಕರು ವೀವೆಕನಂದರ ಚಿಂತನೆಗಳನ್ನು ಮೈಗೂಡಿಸಿಕೊಳ್ಳ ಬೇಕು ಎಂದರು.

ಪ್ರಾರ್ಥನೆಯನ್ನು ಶ್ರೀಮತಿ. ಜಾನ್ಸಿ ಮತ್ತು ತಂಡ ಮಾಡಿದರು. ಸ್ವಾಗತವನ್ನು  ಕುಮಾರಿ ಲಶಿಕಾ ಕಾರ್ಯಪ್ಪ,ಅತಿಥಿಗಳ ಪರಿಚಯ ವನ್ನು  ಕುಮಾರಿ ಅಮಲ ಮರಿಯ ಮಾಡಿದರು. ವಂದನಾರ್ಪಣೆಯನ್ನು ಕುಮಾರಿ ಶಿಲ್ಪಬಾಬು ನಿರೂಪಣೆಯನ್ನು  ಶ್ರೀಮತಿ ಅನುಶ್ ಮತ್ತು ಶ್ರೀ.ರಾಜೇಂದ್ರ ಮಾಡಿದರು.

ಸರ್ವೋದಯ ಶಿಕ್ಷಣ ಮಹಾವಿದ್ಯಾಲಯದ ಅಧ್ಯಕ್ಷೆ  ಶ್ರೀಮತಿ. ಸೂರ್ಯಕುಮಾರಿ ಸಿ.ಜಿ ಯವರ  ದಿವ್ಯ ಉಪಸ್ಥಿತಿಯಲ್ಲಿ ಸರ್ವೋದಯ ಶಿಕ್ಷಣ ಮಹಾವಿದ್ಯಾಲಯ ಖಜಾಂಚಿ ಶ್ರೀಮತಿ. ವಾಸಂತಿ ಕೆ. ಬೋಧಕ ಹಾಗೂ ಬೋಧಕೇತರ ವೃಂದ ಹಾಗೂ ಪ್ರಶಿಕ್ಷಣಾರ್ಥಿಗಳು ಹಾಜರಿದರು.

Join Whatsapp
Exit mobile version