Home ಟಾಪ್ ಸುದ್ದಿಗಳು ಕೋವಿಡ್ ಲಸಿಕೆ ಹಾಕಿಸದವರಿಗೆ ಸಾರ್ವಜನಿಕ ಸ್ಥಳ ಪ್ರವೇಶಕ್ಕೆ ನಿಷೇಧ ಹೇರಿದ ಅಸ್ಸಾಮ್ ಸರ್ಕಾರ

ಕೋವಿಡ್ ಲಸಿಕೆ ಹಾಕಿಸದವರಿಗೆ ಸಾರ್ವಜನಿಕ ಸ್ಥಳ ಪ್ರವೇಶಕ್ಕೆ ನಿಷೇಧ ಹೇರಿದ ಅಸ್ಸಾಮ್ ಸರ್ಕಾರ

ಗುವಾಹಟಿ: ದೇಶದೆಲ್ಲೆಡೆ ಕೊರೊನಾ ಭೀತಿಯ ನಡುವೆ ಕೋವಿಡ್ ಲಸಿಕೆ ಹಾಕಿಸಿ ಕೊಳ್ಳದವರಿಗೆ ಆಸ್ಪತ್ರೆ ಹೊರತುಪಡಿಸಿ ಇತರ ಸಾರ್ವಜನಿಕ ಸ್ಥಳಗಳಿಗೆ ಪ್ರವೇಶಿಸುವುದನ್ನು ಅಸ್ಸಾಮ್ ಸರ್ಕಾರ ನಿಷೇಧ ಹೇರಿದೆ.

ಈ ಕುರಿತು ಪ್ರತಿಕ್ರಿಯಿಸಿದ ಅಸ್ಸಾಮ್ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಕೋವಿಡ್ ಲಸಿಕೆ ಕಡ್ಡಾಯವಲ್ಲ. ಆದರೆ ಲಸಿಕೆ ಹಾಕಿಸದವರು ಸಭೆ ಸಮಾರಂಭ, ಕಚೇರಿ ಮತ್ತು ರೆಸ್ಟೋರೆಂಟ್ ಸೇರಿದಂತೆ ಸಾರ್ವಜನಿಕ ಸ್ಥಳಗಳಿಗೆ ಪ್ರವೇಶಿಸದೆ ಮನೆಯಲ್ಲೇ ಉಳಿಯಬೇಕೆಂದು ತಿಳಿಸಿದ್ದಾರೆ.

ಸೋಮವಾರ ಅಸ್ಸಾಮ್ ನಲ್ಲಿ 6982 ಹೊಸ ಕೊರೊನಾ ಪ್ರಕರಣ ಪತ್ತೆಯಾಗಿತ್ತು.

ರಾಜ್ಯದೆಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ಕೋವಿಡ್ ಪ್ರಕರಣವನ್ನು ನಿಯಂತ್ರಿಸುವ ಸಲುವಾಗಿ ಎರಡು ಡೋಸ್ ಲಸಿಕೆ ಪಡೆಯದವರು ಆಸ್ಪತ್ರೆ ಹೊರತುಪಡಿಸಿ ಸಾರ್ವಜನಿಕ ಸ್ಥಳಗಳಾದ ಕಚೇರಿ, ಮಾರುಕಟ್ಟೆ, ಮಾಲ್ ಮತ್ತು ಇನ್ನಿತರ ಸ್ಥಳಗಳಲ್ಲಿ ಸಂಚರಿಸುವುದನ್ನು ನಿಷೇಧಿಸಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಮಾತ್ರವಲ್ಲ ಎರಡು ಡೋಸ್ ಲಸಿಕೆ ಹಾಕಿದ ಸರ್ಕಾರಿ ಸಿಬ್ಬಂದಿಗೆ ಕಚೇರಿಗೆ ಹಾಜರಾಗಲು ಅವಕಾಶ ನೀಡಲಾಗಿದೆ ಎಂದು ಸರ್ಕಾರ ತನ್ನ ಆದೇಶದಲ್ಲಿ ತಿಳಿಸಿದೆ.

Join Whatsapp
Exit mobile version