Home ಟಾಪ್ ಸುದ್ದಿಗಳು ಮಹಿಳೆಯ ಮೇಲೆ ಬಿಜೆಪಿ ನಾಯಕನ ಲೈಂಗಿಕ ದೌರ್ಜನ್ಯ ವೀಡಿಯೋ ವೈರಲ್

ಮಹಿಳೆಯ ಮೇಲೆ ಬಿಜೆಪಿ ನಾಯಕನ ಲೈಂಗಿಕ ದೌರ್ಜನ್ಯ ವೀಡಿಯೋ ವೈರಲ್

ಮಹಾರಾಷ್ಟ್ರ: ಬಿಜೆಪಿ ನಾಯಕ ಶ್ರೀಕಾಂತ್ ದೇಶ್ಮುಖ್ ಎಂಬಾತ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಸೋಲಾಪುರ ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಸ್ಥಾನದಿಂದ ರಾಜೀನಾಮೆ ಪಡೆಯಲಾಗಿದೆ.


ಸಂತ್ರಸ್ತೆಯು ಕ್ಯಾಮರಾದಲ್ಲಿ ತನ್ನ ಹೆಸರನ್ನು ಹೇಳಿಕೊಂಡು, ದೇಶ್ಮುಖ್ ಅನ್ನು ತೋರಿಸಿ ಈತ ತನಗೆ ಮೋಸ ಮಾಡಿದ ವ್ಯಕ್ತಿ. ಈತ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಹೇಳುತ್ತಾಳೆ. ಈ ವೇಳೆ ಆತ ವೀಡಿಯೋ ಮಾಡದಂತೆ ಅಡ್ಡಿ ಪಡಿಸುತ್ತಾನೆ. ಆದರೆ ಆ ಮಹಿಳೆ, ಈಗ ನೋಡು.. ನಾನು ನಿನ್ನನ್ನು ಬಿಡುವುದಿಲ್ಲ. ನೀನು ನನಗೆ ಯಾಕೆ ಸುಳ್ಳು ಹೇಳಿದೆ? ಎಂದು ಪ್ರಶ್ನಿಸುತ್ತಾಳೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Join Whatsapp
Exit mobile version