Home ಟಾಪ್ ಸುದ್ದಿಗಳು ಮೋದಿಯನ್ನು ಟೀಕಿಸುವ ಫ್ಲೆಕ್ಸ್ ಗಳನ್ನು ಹಾಕಿದ್ದ ಐವರ ಬಂಧನ

ಮೋದಿಯನ್ನು ಟೀಕಿಸುವ ಫ್ಲೆಕ್ಸ್ ಗಳನ್ನು ಹಾಕಿದ್ದ ಐವರ ಬಂಧನ

ಲಕ್ನೋ: ಕಳೆದ ವಾರ ಪ್ರಯಾಗ್ ರಾಜ್ ನಲ್ಲಿ ‘‘ಬಾಯ್ ಬಾಯ್ ಮೋದಿ’’ ಎಂದು ಬರೆದ ಬ್ಯಾನರ್ ಅಳವಡಿಸಿದ ಆರೋಪದಲ್ಲಿ ಐವರನ್ನು ಸೋಮವಾರ ಉತ್ತರಪ್ರದೇಶ ಪೊಲೀಸರು ಬಂಧಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ರೂ. 1,105 ರೂಪಾಯಿಯ ಬೆಲೆಯ ಎಲ್ ಪಿಜಿ ಸಿಲಿಂಡರ್ ಹಿಡಿದಿರುವ ವ್ಯಂಗ್ಯ ಚಿತ್ರವನ್ನು ಆ ಬ್ಯಾನರ್ ನಲ್ಲಿ ಬರೆಯಲಾಗಿತ್ತು.

ಅಲ್ಲದೆ, ‘‘ನೀವು ಕೃಷಿ ಕಾಯ್ದೆಯ ವಿರುದ್ಧ ಪ್ರತಿಭಟನೆಯ ಸಂದರ್ಭ ಹಲವು ಕೃಷಿಕರ ಬದುಕನ್ನು ಕಸಿದುಕೊಂಡಿದ್ದೀರಿ’’ ಹಾಗೂ ‘‘ಗುತ್ತಿಗೆ ಉದ್ಯೋಗದಿಂದ ಯುವಕರ ಕನಸನ್ನು ಕೊಂದಿದ್ದೀರಿ’’ ಎಂದೂ ಬರೆಯಲಾಗಿದೆ. 

ಫ್ಲೆಕ್ಸ್ ಅಳವಡಿಸಿದ ಆರೋಪದಲ್ಲಿ ಅಭಯ್ ಕುಮಾರ್ ಸಿಂಗ್, ಅಂಕಿತ್ ಕೇಸರಿ, ರಾಜೇಶ್ ಕೇಸರ್ವಾನಿ, ಶಿವ ಹಾಗೂ ನಾಂಕಾ ಆಲಿಯಾಸ್ ಧರ್ಮೇಂದ್ರ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳ ವಿರುದ್ಧ ಕರ್ನಲ್ ಗಂಜ್ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 ಬಿ (ರಾಷ್ಟ್ರೀಯ ಐಕ್ಯತೆಗೆ ಧಕ್ಕೆ ತರುವ ಆರೋಪಗಳು, ಪ್ರತಿಪಾದನೆಗಳು) ಮತ್ತು 505 (2) (ವರ್ಗಗಳ ನಡುವೆ ದ್ವೇಷ, ದ್ವೇಷ ಅಥವಾ ದ್ವೇಷವನ್ನು ಸೃಷ್ಟಿಸುವ ಅಥವಾ ಉತ್ತೇಜಿಸುವ ಹೇಳಿಕೆಗಳು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ನಗರದ ಎರಡು ಪ್ರಮುಖ ಜಂಕ್ಷನ್ ಗಳಲ್ಲಿ ಹಾಕಲಾದ ಹೋರ್ಡಿಂಗ್ಸ್ ಗಳು ಪ್ರಧಾನಿ ಮೋದಿಯವರನ್ನು “ಮಾನಹಾನಿ” ಮಾಡುವ ಉದ್ದೇಶವನ್ನು ಹೊಂದಿವೆ ಎಂದು ಪೊಲೀಸರು ಹೇಳಿದ್ದಾರೆ.

Join Whatsapp
Exit mobile version