ಉತ್ತರ ಪ್ರದೇಶ ರೈಲು ದುರಂತ: ಸಾವಿನ ಸಂಖ್ಯೆ ನಾಲ್ಕಕ್ಕೆ ಏರಿಕೆ, 32 ಮಂದಿಗೆ ಗಾಯ

Prasthutha|

ಗೊಂಡಾ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯಲ್ಲಿ ಸಂಭವಿಸಿದ ಚಂಡೀಗಢ–ದಿಬ್ರೂಗಢ ಎಕ್ಸ್ ಪ್ರೆಸ್ ರೈಲು ಅವಘಡದಲ್ಲಿ ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. ಘಟನೆಯಲ್ಲಿ 32 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

- Advertisement -


ಗುರುವಾರ ಮಧ್ಯಾಹ್ನ ಗೊಂಡಾ–ಗೋರಖಪುರ ವಿಭಾಗದ ಝಿಲಾಯಿ ರೈಲು ನಿಲ್ದಾಣ ಸಮೀಪ ರೈಲಿನ ಎಂಟು ಬೋಗಿಗಳು ಹಳಿತಪ್ಪಿದವು.


‘ಅವಘಡದಲ್ಲಿ ಈವರೆಗೆ ನಾಲ್ವರು ಪ್ರಯಾಣಿಕರು ಮೃತಪಟ್ಟಿದ್ದಾರೆ. 32 ಮಂದಿ ಗಾಯಗೊಂಡಿದ್ದು, 12 ಜನರ ಸ್ಥಿತಿ ಗಂಭೀರವಾಗಿದೆ. ಇವರಲ್ಲಿ ಇಬ್ಬರು ಪ್ರಯಾಣಿಕರು ಲಖನೌದ ಟ್ರಾಮಾ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಗೊಂಡಾ ಜಿಲ್ಲಾಧಿಕಾರಿ ನೇಹಾ ಶರ್ಮಾ ತಿಳಿಸಿದ್ದಾರೆ



Join Whatsapp
Exit mobile version