Home ಟಾಪ್ ಸುದ್ದಿಗಳು ಹಿಂಸಾಚಾರದ ಬೆನ್ನಲ್ಲೇ ಟ್ರಂಪ್ ಗೆ ದೊಡ್ಡ ಹಿನ್ನಡೆ | ಸಚಿವರು, ಹಿರಿಯ ಅಧಿಕಾರಿಗಳ ರಾಜೀನಾಮೆ

ಹಿಂಸಾಚಾರದ ಬೆನ್ನಲ್ಲೇ ಟ್ರಂಪ್ ಗೆ ದೊಡ್ಡ ಹಿನ್ನಡೆ | ಸಚಿವರು, ಹಿರಿಯ ಅಧಿಕಾರಿಗಳ ರಾಜೀನಾಮೆ

ವಾಷಿಂಗ್ಟನ್ : ಅಮೆರಿಕದ ಸಂಸತ್ ಭವನಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಿಗರು ನುಗ್ಗಿ, ದಾಂಧಲೆ ನಡೆಸಿದ ಬೆನ್ನಲ್ಲೇ ಅವರಿಗೆ ದೊಡ್ಡ ಹಿನ್ನಡೆಯೊಂದಾಗಿದೆ. ತಮ್ಮ ಬೆಂಬಲಿಗರು ಸಂಸತ್ ಭವನದಲ್ಲಿ ಹಿಂಸಾಚಾರ ನಡೆಸಿದ ಬಳಿಕ, ಟ್ರಂಪ್ ಅವರಿಗೆ ಅವರದ್ದೇ ಸಚಿವ ಸಂಪುಟದಿಂದ ಇಬ್ಬರು ಸಚಿವರು ರಾಜೀನಾಮೆ ನೀಡುವ ಮೂಲಕ ಆಘಾತ ನೀಡಿದ್ದಾರೆ.

ಶಿಕ್ಷಣ ಸಚಿವ ಬೆಟ್ಸಿ ಡಿವೊಸ್ ಮತ್ತು ಸಾರಿಗೆ ಸಚಿವ ಎಲೈನ್ ಚಾವೊ ಗುರುವಾರ ರಾಜಿನಾಮೆ ನೀಡಿದ್ದಾರೆ. ಅಲ್ಲದೆ, ಕೆಲವು ಹಿರಿಯ ಅಧಿಕಾರಿಗಳೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಟ್ರಂಪ್ ಅವರ ಆಡಳಿತದ ಹಿರಿಯ ಅಧಿಕಾರಿ ಮಿಕ್ ಮುಲ್ವಾನೆ, ರಾಷ್ಟ್ರೀಯ ಭದ್ರತಾ ಮಂಡಳಿಯ ಯುರೋಪಿಯನ್ ಮತ್ತು ರಷ್ಯಾದ ಉನ್ನತಾಧಿಕಾರಿ ರಿಯಾನ್ ಟುಲ್ಲಿ ಕೂಡ ರಾಜಿನಾಮೆ ನೀಡಿದ್ದಾರೆ.

Join Whatsapp
Exit mobile version