ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಅಶ್ಲೀಲ ವಿಡಿಯೋ ವೈರಲ್: ಸಂತ್ರಸ್ತೆಯ ದೂರು, FIR ದಾಖಲು

Prasthutha|

ರಾಮನಗರ: ರಾಮನಗರ ಶಾಸಕ ಹೆಚ್​ಎ ಇಕ್ಬಾಲ್ ಹುಸೇನ್ ಅಶ್ಲೀಲ ವಿಡಿಯೋ ವೈರಲ್ ಸಂಬಂಧ ಸಂತ್ರಸ್ತೆ ರಾಮನಗರದ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಂತ್ರಸ್ತೆಯ ದೂರಿನ ಅನ್ವಯ ಪೊಲೀಸರು FIR ದಾಖಲಿಸಲಾಗಿದೆ.

- Advertisement -

ನನ್ನ ಹಾಗೂ ಇಕ್ಬಾಲ್ ಹುಸೇನ್ ಅವರದ್ದು ತಂದೆ-ಮಗಳ ಸಂಬಂಧ. ನಾನು ಅವರೊಂದಿಗೆ ಮಾತಾಡಿದ ವಿಡಿಯೋ ಕರೆಯನ್ನು ದುರುಪಯೋಗ ಮಾಡಲಾಗಿದೆ. ವಿಡಿಯೋ ಒಳ ಉಡುಪಿನಲ್ಲಿ ಇರುವ ಹಾಗೇ ಸೃಷ್ಟಿಸಿ ತೇಜೋವಧೆ ಮಾಡಿದ್ದಾರೆ. ತಮ್ಮಣ್ಣಗೌಡ ಗುಂಡ್ಕಲ್ ಎಂಬುವರ ಫೇಸ್​ಬುಕ್ ಖಾತೆಯಲ್ಲಿ ಈ ವಿಡಿಯೋ ವೈರಲ್ ಆಗಿದೆ. ಶಾಸಕರು ಮತ್ತು ನಾನು ಮಾತನಾಡಿರುವುದನ್ನ ತಿರುಚಲಾಗಿದೆ. ಈ ಬಗ್ಗೆ ಕ್ರಮವಹಿಸಬೇಕು ಎಂದು ಸಂತ್ರಸ್ತೆ ದೂರಿನಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಈ ವಿಡಿಯೋದಿಂದ ನನ್ನ ಮಾನಹಾನಿಯಾಗಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಸಂತ್ರಸ್ತೆ ದೂರಿನಲ್ಲಿ ಆಗ್ರಹಿಸಿದ್ದಾರೆ.

Join Whatsapp
Exit mobile version