ಬೀಚಿಂಗ್: ಮೊದಲು ನಿಮ್ಮ ಬಲೂನು ಹಾರಿಸುವ ಚಟ ನಿಲ್ಲಿಸಿ, ಆಮೇಲೆ ಬೇರೆಯವರನ್ನು ದೂರುವುದನ್ನು ಮಾಡಿ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರರು ಅಮೆರಿಕಕ್ಕೆ ಎಚ್ಚರಿಕೆ ನೀಡಿದ್ದಾರೆ.
2022ರ ಜನವರಿಯಿಂದ ಅಮೆರಿಕ ಸಂಯುಕ್ತ ಸಂಸ್ಥಾನದ ಬಲೂನುಗಳು ಹತ್ತು ಬಾರಿ ಚೀನಾದ ವಾಯು ಪ್ರದೇಶದೊಳಕ್ಕೆ ಬಂದಿವೆ. ಆದರೆ ಮೊನ್ನೆ ಯುಎಸ್’ಎಯು ನಮ್ಮ ಸರ್ವೇಕ್ಷಣಾ ಬಲೂನನ್ನು ಅವರ ವಾಯು ಪ್ರದೇಶದ ಗಡಿಯಲ್ಲಿ ಹೊಡೆದುರುಳಿಸಿದೆ ಎಂದು ಚೀನಾದ ವಿದೇಶಾಂಗ ಸಚಿವಾಲಯವು ವಾಷಿಂಗ್ಟನ್’ಗೆ ಎಚ್ಚರಿಸುವುದರೊಂದಿಗೆ ಎರಡು ದೇಶಗಳ ನಡುವಣ ಶೀತನ ಸರಮ ಮತ್ತೆ ಉಲ್ಭಣಿಸಿದೆ.
“ಕಳೆದೊಂದು ವರ್ಷದಲ್ಲಿ ಯಾವುದೇ ಅನುಮತಿ ಪಡೆಯದೆ ಯುಎಸ್’ಎಯ ಬಲೂನುಗಳು ಹತ್ತು ಬಾರಿ ಚೀನಾದ ವಾಯು ಪ್ರದೇಶದೊಳಕ್ಕೆ ನುಗ್ಗಿ ಹೋಗಿವೆ. ಅಮೆರಿಕವು ಮೊದಲು ಬಲೂನುಗಳನ್ನು ಎಲ್ಲೆಲ್ಲೋ ಬಿಡುವ ಚಾಳಿಯನ್ನು ಬಿಡಲಿ. ಆಮೇಲೆ ಬೇರೆಯವರನ್ನು ಆಪಾದಿಸಲಿ” ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ಬಿನ್ ತಿರುಗೇಟು ನೀಡಿದ್ದಾರೆ.