ಮಂಗಳೂರು: ವಿಟ್ಲದ ಕಡಂಬು ಎಂಬಲ್ಲಿ 2 ಕೋಮುಗಳ ಜನರು ಅಕ್ರಮ ಗುಂಪು ಸೇರಿ ಪೊಲೀಸರಿಗೆ ಹಲ್ಲೆ ನಡೆಸಿ ಕೊಲೆಯತ್ನ ನಡೆಸಿದ ಹಾಗೂ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಪ್ರಕರಣದ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿ ನ್ಯಾಯಾಲಯ ತೀರ್ಪು ನೀಡಿದೆ.
ಈ ಬಗ್ಗೆ 25-01-2019 ರಂದು ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ದಕ್ಷಿಣ ಕನ್ನಡ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಲ್ಲಾ ಆರೋಪಿತರನ್ನು ಖುಲಾಸೆಗೊಳಿಸಿ ಸೋಮವಾರ ತೀರ್ಪು ಪ್ರಕಟಿಸಿದೆ.
ಈ ಪ್ರಕರಣದಲ್ಲಿ ಆರೋಪಿ ಸಂಖ್ಯೆ 12ರಿಂದ 22 ಆರೋಪಿತರ ಪರವಾಗಿ ಲೆಕ್ಸ್ ಜ್ಯೂರಿಸ್ ಲಾ ಚೇಂಬರ್ ಮಂಗಳೂರಿನ ವಕೀಲರಾದ ಉಮರ್ ಫಾರೂಕ್ ಮುಲ್ಕಿ, ಹೈದರ್ ಅಲಿ ಕಿನ್ನಿಗೋಳಿ, ಇರ್ಷಾದ್ ಮೊಂಟೆಪದವು ವಾದಿಸಿದ್ದರು.