Home ಟಾಪ್ ಸುದ್ದಿಗಳು ಪ್ರಧಾನಿ ಬಂದು ಉದ್ಘಾಟಿಸಿದ ನಾಲ್ಕನೇ ದಿನದಲ್ಲಿ ಕುಸಿದ ಉತ್ತರಪ್ರದೇಶದ ಬುಂದೇಲ್ಖಂಡ್ ಎಕ್ಸ್ ಪ್ರೆಸ್ ವೇ

ಪ್ರಧಾನಿ ಬಂದು ಉದ್ಘಾಟಿಸಿದ ನಾಲ್ಕನೇ ದಿನದಲ್ಲಿ ಕುಸಿದ ಉತ್ತರಪ್ರದೇಶದ ಬುಂದೇಲ್ಖಂಡ್ ಎಕ್ಸ್ ಪ್ರೆಸ್ ವೇ

ನೋಯ್ಡ: ಬುಂದೇಲ್ಖಂಡ್ ಎಕ್ಸ್ ಪ್ರೆಸ್ ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರ ಕನಸಿನ ಯೋಜನೆಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು. ಆದರೆ ಉದ್ಘಾಟನೆಯಾದ ನಾಲ್ಕನೇ ದಿನಕ್ಕೇ ಅದರ ಭಾಗವೊಂದು ಕುಸಿದಿದ್ದು, ಕರ್ನಾಟಕ ಬಿಜೆಪಿ ಸರಕಾರದಂತೆ 40 ಪರ್ಸೆಂಟ್ ಸಚಿವರಿಗೆ ಹೋಗಿದ್ದರ ಪರಿಣಾಮವೇ ಎಂದು ಕೇಳುವಂತಾಗಿದೆ. ಇದರಿಂದಾಗಿ ಸಾಮಾಜಿಕ ಮಾಧ್ಯಮದಲ್ಲಿ ಬುಂದೇಲ್ಖಂಡ್ ಎಕ್ಸ್ ಪ್ರೆಸ್ ವೇ ಗುಣಮಟ್ಟದ ಬಗ್ಗೆ ಪ್ರಶ್ನೆಗಳನ್ನು ಎತ್ತಲಾಗುತ್ತಿದೆ.

ಪ್ರಧಾನಿ ಉದ್ಘಾಟಿಸಿದ ಕಾಮಗಾರಿಯ ಎಕ್ಸ್ ಪ್ರೆಸ್ ವೇಯ 195 ಕಿಮೀ ದೂರದಲ್ಲಿರುವ ಚಿರಿಯಾ ಸೇಲಂಪುರ ಬಳಿ ಚಿತ್ರಕೂಟ ಲೇನ್ಗೆ ಹೋಗುವ ರಸ್ತೆ ಕುಸಿದಿದೆ ಎಂದು ಯುಪಿ ಮಾಧ್ಯಮವೊಂದು ವರದಿ ಮಾಡಿದೆ. ಪೈಪ್ಲೈನ್ ಒಡೆದು ಮಣ್ಣು ಕುಸಿದಿದೆ ಎಂದು ಹೇಳಲಾಗುತ್ತಿದ್ದು, ಇದರಿಂದಾಗಿ ಎರಡು ಅಡಿ ಅಗಲ ಮತ್ತು ಆರು ಅಡಿ ಉದ್ದದ ಹೊಂಡವೊಂದು ಸೃಷ್ಟಿಯಾಗಿದೆ ಎನ್ನಲಾಗಿದೆ.

ಎಕ್ಸ್ ಪ್ರೆಸ್ ವೇಯಲ್ಲಿ ರಸ್ತೆ ಕುಸಿದಿರುವ ಬಗ್ಗೆ ಮಾಹಿತಿ ತಿಳಿದ ತಕ್ಷಣ ಆಡಳಿತ ಸಿಬ್ಬಂದಿ ಕಾರ್ಯಾಚರಣೆಗೆ ನಡೆಸಿದ್ದಾರೆ. ಸದ್ಯ ರಸ್ತೆ ದುರಸ್ತಿ ಮಾಡಲಾಗಿದೆ ಎನ್ನಲಾಗಿದೆ. ಜುಲೈ 16 ರಂದು ಪ್ರಧಾನಿ ಮೋದಿ ಜಲೌನ್ನಿಂದ ಬುಂದೇಲ್ಖಂಡ್ ಎಕ್ಸ್ ಪ್ರೆಸ್ ವೇಯನ್ನು ಉದ್ಘಾಟಿಸಿದ ಬಳಿಕ ಸಂಚಾರ ಆರಂಭಿಸಲಾಗಿತ್ತು.

Join Whatsapp
Exit mobile version