Home ಟಾಪ್ ಸುದ್ದಿಗಳು ಲಾರಿಗೆ ಟೆಂಪೋ ಟ್ರಾವೆಲರ್ ಡಿಕ್ಕಿ;ಇಬ್ಬರು ದಾರುಣ ಸಾವು

ಲಾರಿಗೆ ಟೆಂಪೋ ಟ್ರಾವೆಲರ್ ಡಿಕ್ಕಿ;ಇಬ್ಬರು ದಾರುಣ ಸಾವು

ಕಲಬುರಗಿ: ನಿಂತಿದ್ದ ಲಾರಿಗೆ ಟೆಂಪೋ ಟ್ರಾವೆಲರ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜೇವರ್ಗಿ ಹತ್ತಿರದ ಗೌನಳ್ಳಿ ಕ್ರಾಸ್ ಬಳಿ ನಡೆದಿದೆ.


ಬೆಳಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದ್ದು, ತಾಲೂಕಿನ ಹಾಗರಗುಂಡಗಿ ಗ್ರಾಮದ ಸಂಜೀವಕುಮಾರ ವಜಾಪುರ್ (30) ಹಾಗೂ ಟೆಂಪೋ ಟ್ರಾವೆಲರ್ ಚಾಲಕ ಅಪ್ಪರಾಯ ಬಿರಾದಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹಾಗರಗುಂಡಗಿ ಗ್ರಾಮದ ಒಂದೇ ಕುಟುಂಬದವರಾದ ಇವರು, ಕಳೆದ ಒಂದು ವಾರದ ಹಿಂದೆ ಕರ್ನಾಟಕ ಯಾತ್ರೆಗೆ ತೆರಳಿ ವಾಪಸ್ ಮರಳುತ್ತಿದ್ದ ವೇಳೆ ಊರ ಸಮೀಪದಲ್ಲೇ ದುರ್ಘಟನೆ ಸಂಭವಿಸಿದೆ.


ತೂಕಡಿಸುತ್ತಿದ್ದ ಟಿಟಿ ವಾಹನದ ಚಾಲಕ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಟೆಂಪೋ ಟ್ರಾವೆಲರ್ ವಾಹನದ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ವಾಹನದಡಿ ಸಿಲುಕಿದ್ದ ಡ್ರೈವರ್ ನ ಮೃತದೇಹವನ್ನು ಪೊಲೀಸರು ಹೊರ ತೆಗೆದಿದ್ದಾರೆ.


ಟಿಟಿ ವಾಹನದಲ್ಲಿದ್ದ ಹಲವರಿಗೆ ಗಂಭೀರ ಗಾಯಗಳಾಗಿದ್ದು, ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp
Exit mobile version