Home ಟಾಪ್ ಸುದ್ದಿಗಳು ಟರ್ಕಿ | ಬಾಂಬ್ ಸ್ಫೋಟ : ಕನಿಷ್ಠ 6 ಸಾವು, 81 ಮಂದಿ ಗಾಯ

ಟರ್ಕಿ | ಬಾಂಬ್ ಸ್ಫೋಟ : ಕನಿಷ್ಠ 6 ಸಾವು, 81 ಮಂದಿ ಗಾಯ

ಇಸ್ತಾಂಬುಲ್: ಟರ್ಕಿಯ ರಾಜಧಾನಿ ಇಸ್ತಾಂಬುಲ್ ನ ಐತಿಹಾಸಿಕ ಇಸ್ತಿಕ್ ಲಾಲ್ ಅವೆನ್ಯೂ ಸ್ಟ್ರೀಟ್ ನಲ್ಲಿ ನಡೆದ ಬಾಂಬ್ ಸ್ಫೋಟದಿಂದಾಗಿ ಕನಿಷ್ಠ ಆರು ಜನರು ಸಾವನ್ನಪ್ಪಿದ್ದು, 81 ಮಂದಿ ಗಾಯಗೊಂಡಿದ್ದಾರೆ.

ಭಾನುವಾರ ಸಂಜೆ ಈ ಘಟನೆ ನಡೆದಿದ್ದು, ಘಟನೆಯಲ್ಲಿ 81ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಟರ್ಕಿಯು ಭಯೋತ್ಪಾದನೆಗೆ ತಲೆಬಾಗುವುದಿಲ್ಲ. ದಾಳಿಗೆ ಕಾರಣರಾದ ಎಲ್ಲರನ್ನು ಗುರುತಿಸಿ, ಬಂಧಿಸುತ್ತೇವೆ. ಇಸ್ತಿಕ್ ಲಾಲ್ ಸ್ಟ್ರೀಟ್ ನಲ್ಲಿ ಬಾಂಬಿಟ್ಟು ಅಮಾಯಕರ ಸಾವಿಗೆ ಕಾರಣರಾದ ದುಷ್ಕರ್ಮಿಗಳಿಗೆ ಅರ್ಹವಾದ ಶಿಕ್ಷೆಯಾಗುತ್ತದೆ ಎಂದು ಅಧ್ಯಕ್ಷ ರೆಸೆಪ್ ತಯ್ಯಿಬ್ ಎರ್ದೋಗಾನ್ ಹೇಳಿದ್ದಾರೆ.

ಇಸ್ತಾಂಬುಲ್ ಗವರ್ನರ್ ಅಲಿ ಯೆರ್ಲಿಕಾಯಾ ಘಟನೆಯ ಬಗ್ಗೆ ಮಾಹಿತಿ ನೀಡಿದ್ದು, ಬಾಂಬ್ ಇಟ್ಟು ಸ್ಥಳದಿಂದ ತೆರಳಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ ಮತ್ತು ಪ್ರಾಥಮಿಕ ತನಿಖೆಯಂತೆ ಪಿಕೆಕೆ, ವೈಪಿಜಿ ಭಯೋತ್ಪಾದಕ ಗುಂಪು ಈ ಬಾಂಬ್ ದಾಳಿಯ ಹಿಂದೆ ಇದೆ ಎಂದು ತಿಳಿದುಬಂದಿದೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾವು ಬಯಸುತ್ತೇವೆ ಎಂದು ಹೇಳಿದ್ದಾರೆ.

ಈ ಬಗ್ಗೆ ಭಾರತವು ಟರ್ಕಿ ಸರ್ಕಾರ ಮತ್ತು ಜನರಿಗೆ ತನ್ನ ಸಂತಾಪವನ್ನು ವ್ಯಕ್ತಪಡಿಸಿದ್ದು, ಸಾವಿಗೀಡಾದ ಕುಟುಂಬದ ಜತೆ ನಮ್ಮ ಸಹಾನುಭೂತಿ ಇದೆ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಟ್ವೀಟ್ ಮಾಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಶಂಕಿತನನ್ನು ವಶಕ್ಕೆ ಪಡೆದಿರುವ ಪೊಲೀಸರು ತೀವ್ರ ವಿಚಾರಣೆಗೊಳಡಿಸಿದ್ದಾರೆಂದು ತಿಳಿದುಬಂದಿದೆ.

Join Whatsapp
Exit mobile version