Home ಟಾಪ್ ಸುದ್ದಿಗಳು ಸ್ಟೇಟ್’ಬ್ಯಾಂಕ್ ನಲ್ಲಿ ಸಿಟಿ ಬಸ್ ಸ್ಥಳಾಂತರ: ಡಿ.21ರಂದು ಕಾರ್ಮಿಕ ಪರಿಷತ್, ವ್ಯಾಪಾರಿಗಳ ಒಕ್ಕೂಟದಿಂದ ಪ್ರತಿಭಟನೆ

ಸ್ಟೇಟ್’ಬ್ಯಾಂಕ್ ನಲ್ಲಿ ಸಿಟಿ ಬಸ್ ಸ್ಥಳಾಂತರ: ಡಿ.21ರಂದು ಕಾರ್ಮಿಕ ಪರಿಷತ್, ವ್ಯಾಪಾರಿಗಳ ಒಕ್ಕೂಟದಿಂದ ಪ್ರತಿಭಟನೆ

ಮಂಗಳೂರು: ಸ್ಟೇಟ್ ಬ್ಯಾಂಕ್ ನಲ್ಲಿ ಸಿಟಿ ಬಸ್ ಸ್ಥಳಾಂತರಿಸಿದ ಕ್ರಮ ಕಾನೂನುಬಾಹಿರ ಎಂದು ಆರೋಪಿಸಿರುವ ದ.ಕ. ಜಿಲ್ಲಾ ಕಾರ್ಮಿಕ ಪರಿಷತ್ ಹಾಗೂ ಸ್ಟೇಟ್ ಬ್ಯಾಂಕ್ ಪರಿಸರದ ವ್ಯಾಪಾರಿಗಳ ಸೌಹಾರ್ದ ಒಕ್ಕೂಟ ಡಿ. 21ರಂದು ಪ್ರತಿಭಟನೆ ನಡೆಸಲು ನಿರ್ಧರಿಸಿದೆ.

ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ವಿಧಾನ ಪರಿಷತ್ ನ ಮಾಜಿ ಸದಸ್ಯ ಐವನ್ ಡಿಸೋಜಾ, ಬಸ್ಸು ಮಾಲರ ಲಾಬಿಗೆ ಮಣಿದು ಜಿಲ್ಲಾಡಳಿತ, ಪೊಲೀಸ್ ಇಲಾಖೆಯು ಸಿಟಿ ಬಸ್ಸು, ಎಕ್ಸ್ಪ್ರೆಸ್ ಹಾಗೂ ಕಾಂಟ್ರ್ಯಾಕ್ಟ್ ಕ್ಯಾರಿಯೇಜ್ ಗಳಿಗೆ ಒಂದೇ ನಿಲ್ದಾಣದಲ್ಲಿ ಸ್ಥಳಾವಕಾಶ ಮಾಡುವ ನಿರ್ಧಾರ ಕೈಗೊಂಡಿದೆ. ಡಿ. 21ರಂದು ಬೆಳಗ್ಗೆ 10.30ಕ್ಕೆ ಪೊಲೀಸ್ ಆಯುಕ್ತರ ಕಚೇರಿ ಎದುರು ಪ್ರತಿಭಟನೆಗೆ ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ

Join Whatsapp
Exit mobile version