ಹುಬ್ಬಳ್ಳಿ: ರಾಮ ಮಂದಿರಕ್ಕಾಗಿ ಹೋರಾಟ ಮಾಡಿದ ಅಡ್ವಾಣಿ ಮತ್ತು ಮುರಳಿ ಮನೋಹರ ಜೋಶಿ ಕಡೆಗಣನೆ ಸರಿಯಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ನಗರದಲ್ಲಿಂದು ಮಾತನಾಡಿದ ಅವರು, ಅಡ್ವಾಣಿ ಮತ್ತು ಮುರಳಿ ಮನೋಹರ ಜೋಶಿ ಅವರಿಗೆ ವಯಸ್ಸಿನ ಕಾರಣ ಹೇಳಿ ರಾಮಮಂದಿರ ಲೋಕಾರ್ಪಣೆಗೆ ದೂರವಿಟ್ಟಿದ್ದು ಸರಿಯಲ್ಲ. ರಾಮಮಂದಿರದ ಬಗ್ಗೆ ಇಡೀ ರಾಷ್ಟ್ರದಲ್ಲಿ ಜಾಗೃತಿ ಮೂಡಿಸಿದ್ದು, ಲಾಲ್ ಕೃಷ್ಣ ಅಡ್ವಾಣಿ ಮತ್ತು ಮುರಳಿ ಮನೋಹರ ಜೋಶಿ. ಈ ಸಮಯದಲ್ಲಿ ಇವರ ಉಪಸ್ಥಿತಿ ಬಹಳಷ್ಟು ಪ್ರಮುಖ. ಇವರನ್ನು ನಿರ್ಲಕ್ಷ್ಯ ಮಾಡಿದ್ದು, ದೂರ ಇಟ್ಟಿದ್ದು ಸರಿಯಲ್ಲ. ಅದರಲ್ಲೂ ವಯಸ್ಸಿನ ನೆಪ ಹೇಳಿ ಈಗಾಗಲೇ ಅಡ್ವಾಣಿ ಅವರನ್ನು ಮೂಲೆಗುಂಪು ಮಾಡಲಾಗಿದೆ. ಹೊಸದಾಗಿ ಮೂಲೆಗುಂಪು ಮಾಡೋದು ಏನಿದೆ? ಎಂದರು.