Home ಟಾಪ್ ಸುದ್ದಿಗಳು ಉಳ್ಳಾಲ: ಸಮುದ್ರಕ್ಕೆ ಹಾರಿ ಸಿಟಿ ಬಸ್ ಚಾಲಕ ಆತ್ಮಹತ್ಯೆ

ಉಳ್ಳಾಲ: ಸಮುದ್ರಕ್ಕೆ ಹಾರಿ ಸಿಟಿ ಬಸ್ ಚಾಲಕ ಆತ್ಮಹತ್ಯೆ

ಉಳ್ಳಾಲ : ಸಿಟಿ ಬಸ್ ಚಾಲಕರೊಬ್ಬರು ಸಮುದ್ರಕ್ಕೆ ಹಾರಿ ಆತ್ಮಹತ್ಯೆ ನಡೆಸಿಕೊಂಡಿರುವ ಘಟನೆ ಉಳ್ಳಾಲದ ಸೋಮೇಶ್ವರ ಸಮುದ್ರ ತೀರದಲ್ಲಿ ನಡೆದಿದೆ.

ಜಗದೀಶ್ (39) ಮೃತರು ಎಂದು ಗುರುತಿಸಲಾಗಿದೆ.

ಅವಿವಾಹಿತರಾಗಿರುವ ಜಗದೀಶ್ ಅವರು ಸ್ಟೇಟ್ ಬ್ಯಾಂಕ್ ಮತ್ತು ಕಿನ್ಯಾ ನಡುವೆ ಚಲಿಸುವ ಖಾಸಗಿ ಸಿಟಿ ಬಸ್ ನಲ್ಲಿ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದ. ಇಂದು ಮುಂಜಾನೆ ಸೋಮೇಶ್ವರದ ರುದ್ರಪಾದೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಇದಕ್ಕೂ ಮುನ್ನ ಸಮುದ್ರ ತೀರದಲ್ಲಿ ಬೈಕನ್ನಿಟ್ಟು, ಟವಲೊಂದರಲ್ಲಿ ಬೈಕ್ ಕೀ, ಪರ್ಸ್, ಚಪ್ಪಲಿಗಳನ್ನು ಇಟ್ಟು ಸಮುದ್ರಕ್ಕೆ ಹಾರಿದ್ದಾರೆ.

Join Whatsapp
Exit mobile version