Home ಟಾಪ್ ಸುದ್ದಿಗಳು ಟೋಕಿಯೊ ಒಲಿಂಪಿಕ್ ಚಾಂಪಿಯನ್‌; ನೀರಜ್‌ ಚೋಪ್ರಾ ಫೈನಲ್‌ ಗೆ

ಟೋಕಿಯೊ ಒಲಿಂಪಿಕ್ ಚಾಂಪಿಯನ್‌; ನೀರಜ್‌ ಚೋಪ್ರಾ ಫೈನಲ್‌ ಗೆ

ವಾಷಿಂಗ್ಟನ್: ಟೋಕಿಯೊ ಒಲಿಂಪಿಕ್ ಚಾಂಪಿಯನ್‌ ನಲ್ಲಿ , ಭಾರತದ ಜಾವೆಲಿನ್‌ ಸ್ಪರ್ಧಿ ನೀರಜ್‌ ಚೋಪ್ರಾ ಅವರು ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನ ಪುರುಷರ ಜಾವೆಲಿನ್‌ ಥ್ರೊ ಸ್ಪರ್ಧೆಯ ಫೈನಲ್‌ಗೆ ತಲುಪಿದ್ದಾರೆ.

ತಮ್ಮ ಮೊದಲ ಪ್ರಯತ್ನದಲ್ಲಿಯೇ ಫೈನಲ್‌ಗೆ ಅರ್ಹತೆ ಪಡೆದಿರುವ ನೀರಜ್ ಚೋಪ್ರಾ ಮೊದಲ ಬಾರಿಗೆ ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಫೈನಲ್‌ ತಲುಪಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪುರುಷರ ಜಾವೆಲಿನ್‌ ಥ್ರೊ ಫೈನಲ್ಸ್ ಭಾನುವಾರ ನಡೆಯಲಿದೆ.

ಫೈನಲ್‌ ಗೆ ಅರ್ಹತೆ ಪಡೆಯಲು ಕೇವಲ 10 ಸೆಕೆಂಡುಗಳನ್ನಷ್ಟೇ ತೆಗೆದುಕೊಂಡ ನೀರಜ್‌, ಚಾಂಪಿಯನ್‌ಷಿಪ್‌ನ ಅರ್ಹತಾ ಸುತ್ತಿನಲ್ಲಿ 88.39 ಮೀಟರ್ಸ್ ಸಾಧನೆ ಮಾಡಿದ್ದಾರೆ.

ನಿಯಮಗಳ ಪ್ರಕಾರ, ಫೈನಲ್‌ಗೆ ತಲುಪಲು 83.50 ಮೀಟರ್‌ಗಳ ಜಾವೆಲಿನ್ ಥ್ರೋ ಎಸೆಯುವ ಅಗತ್ಯವಿತ್ತು. ಫೈನಲ್ಗೆ ಅಂತಿಮವಾಗಿ 12 ಅತ್ಯುತ್ತಮ ಪ್ರದರ್ಶನ ನೀಡುವ ಆಟಗಾರರಿಗೆ ಮಾತ್ರ ಅವಕಾಶ ಸಿಗುತ್ತದೆ. ಅದರಂತೆ ಅರ್ಹತಾ ಸುತ್ತಿನಲ್ಲಿ ಚೋಪ್ರಾ ಮೊದಲ ಪ್ರಯತ್ನದಲ್ಲೇ 88.39 ಮೀ. ಜಾವೆಲಿನ್ ಎಸೆದು ಫೈನಲ್ ತಲುಪಿದ್ದಾರೆ.

Join Whatsapp
Exit mobile version