Home ಟಾಪ್ ಸುದ್ದಿಗಳು ಕ್ಯಾನ್ಸರ್’ನಿಂದ ಬಳಲುತ್ತಿದ್ದರೂ IPS ಅಧಿಕಾರಿಗಳಾದ ಮುಹಮ್ಮದ್ ಸಲ್ಮಾನ್, ಮಿಥಿಲೇಶ್ !

ಕ್ಯಾನ್ಸರ್’ನಿಂದ ಬಳಲುತ್ತಿದ್ದರೂ IPS ಅಧಿಕಾರಿಗಳಾದ ಮುಹಮ್ಮದ್ ಸಲ್ಮಾನ್, ಮಿಥಿಲೇಶ್ !

ಬೆಂಗಳೂರು: ಕ್ಯಾನ್ಸರ್ ಕಾಯಿಲೆಗಳೊಂದಿಗೆ ಹೋರಾಡುತ್ತಿರುವ 9ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳು ಬೆಂಗಳೂರಿನಲ್ಲಿ ಕೆಲವು ಗಂಟೆಗಳ ಕಾಲ ಐಪಿಎಸ್ ಅಧಿಕಾರಿಗಳಾಗುವ ತಮ್ಮ ಕನಸು ನನಸಾಗಿದ್ದಾರೆ.


13 ವರ್ಷದ ಮಿಥಿಲೇಶ್ ಮತ್ತು ಮುಹಮ್ಮದ್ ಸಲ್ಮಾನ್ ಖಾನ್ ಅವರು ಉಪ ಪೊಲೀಸ್ ಆಯುಕ್ತರಾಗಿ (ಡಿಸಿಪಿ) ಸಮವಸ್ತ್ರವನ್ನು ಧರಿಸಿ ಆಗ್ನೇಯ ವಿಭಾಗದ ಉಪ ಪೊಲೀಸ್ ಆಯುಕ್ತರ ಕಚೇರಿಗೆ ಭೇಟಿ ನೀಡಿದರು. ಈ ವೇಳೆ ಸಿಬ್ಬಂದಿಗಳು ಗೌರವ ವಂದನೆ ಸಲ್ಲಿಸಿದರು.


ನಂತರ ಅಲ್ಪ ಸಮಯವನ್ನು ಕಚೇರಿಯಲ್ಲಿ ಕಳೆದ ವಿದ್ಯಾರ್ಥಿಗಳು, ಡಿಸಿಪಿ ಅವ ದಿನನಿತ್ಯದ ಕೆಲಸದ ಭಾಗವಾಗಿ ಪೊಲೀಸ್ ಠಾಣೆಗೆ ಭೇಟಿ ನೀಡಿದರು.


ಈ ವೇಳೆ ಪೊಲೀಸ್ ಅಧಿಕಾರಿಯಾಗುವ ಕನಸಿನ ಮಾತನ್ನು ಹಂಚಿಕೊಂಡ ಸಲ್ಮಾನ್, ಸಂಕಷ್ಟದಲ್ಲಿರುವ ಎಷ್ಟೋ ಜನರಿಗೆ ಸಾಂತ್ವನ ನೀಡುವ ಉದಾತ್ತ ವೃತ್ತಿ ಇದಾಗಿದೆ ಎಂದರು. ಈ ವೇಳೆ ಮಿಥಿಲೇಶ್ ಅವರು ಟ್ರಾಫಿಕ್ ನಿರ್ವಹಣೆ ಮತ್ತು ರಸ್ತೆ ಶಿಸ್ತಿನ ಬಗ್ಗೆ ಇರುವ ಆಸಕ್ತಿಯ ಬಗ್ಗೆ ಮಾಹಿತಿ ಹಂಚಿಕೊಂಡರು.


ಬೆಂಗಳೂರಿನಲ್ಲಿ ಪ್ರೌಢಶಾಲೆಯಲ್ಲಿ ಓದುತ್ತಿರುವ ಮತ್ತು ಕ್ಯಾನ್ಸರ್ ಗೆ ಚಿಕಿತ್ಸೆ ಪಡೆಯುತ್ತಿರುವ ಇಬ್ಬರು ಬಾಲಕರ ಆಸೆಗಳನ್ನು ಈಡೇರಿಸುವ ಮೇಕ್-ಎ-ವಿಶ್ ಫೌಂಡೇಶನ್ನ ಉಪಕ್ರಮದ ಭಾಗವಾಗಿ ಈ ಕಾರ್ಯಕ್ರಮವು ನಡೆಯಿತು.

Join Whatsapp
Exit mobile version