Home ಟಾಪ್ ಸುದ್ದಿಗಳು “ದೇಶದ್ರೋಹಿಗಳು” ಹಿಂದಿರುಗಲು ಬಯಸಿದರೆ ಸ್ವಾಗತಿಸುತ್ತೇವೆ: ಆದಿತ್ಯ ಠಾಕ್ರೆ

“ದೇಶದ್ರೋಹಿಗಳು” ಹಿಂದಿರುಗಲು ಬಯಸಿದರೆ ಸ್ವಾಗತಿಸುತ್ತೇವೆ: ಆದಿತ್ಯ ಠಾಕ್ರೆ

ಮುಂಬೈ: ಪಕ್ಷವನ್ನು ತೊರೆದ ‘ದೇಶದ್ರೋಹಿಗಳು’ ಹಿಂದಿರುಗಲು ಬಯಸಿದರೆ ಅವರನ್ನು ಸ್ವಾಗತಿಸಲಾಗುವುದು ಎಂದು ಶಿವಸೇನಾ ನಾಯಕ ಆದಿತ್ಯ ಠಾಕ್ರೆ ಹೇಳಿದ್ದಾರೆ.

ಶಿವಸೇನೆಯ ಬಂಡಾಯ ನಾಯಕ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ತವರು ಜಿಲ್ಲೆ ಥಾಣೆಯ ಭಿವಾಂಡಿ ನಗರದಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ದೇಶದ್ರೋಹಿಗಳು, ಅವರು ಶಿವಸೇನೆಗೆ ಮರಳಲು ಬಯಸಿದರೆ, ಅವರನ್ನು ಸ್ವಾಗತಿಸುತ್ತೇವೆ. ಆದರೆ ಅವರ ಕೃತ್ಯಗಳಿಂದ ನಮಗೆ ತೀವ್ರ ನೋವಾಗಿದೆ. ನಾವು ಅವರನ್ನು ನಂಬಿದ್ದೆವು, ಅವರು ನಮ್ಮ ಬೆನ್ನಿಗೆ ಚೂರಿ ಹಾಕಿದರು” ಎಂದು ಯುವ ಸೇನಾ ನಾಯಕ ಹೇಳಿದರು.

Join Whatsapp
Exit mobile version