Home ಕ್ರೀಡೆ ಟೋಕಿಯೋ ಒಲಿಂಪಿಕ್ಸ್ | ಬೆಳ್ಳಿ ಪದಕದೊಂದಿಗೆ ಯಾನ ಆರಂಭಿಸಿದ ಭಾರತ !

ಟೋಕಿಯೋ ಒಲಿಂಪಿಕ್ಸ್ | ಬೆಳ್ಳಿ ಪದಕದೊಂದಿಗೆ ಯಾನ ಆರಂಭಿಸಿದ ಭಾರತ !

ಟೋಕಿಯೋ : ಜಪಾನ್ ನ ಟೋಕಿಯೋದಲ್ಲಿ ನಡೆಯುತ್ತಿರುವ  ಒಲಿಂಪಿಕ್ಸ್‌ನ ಮೊದಲ ದಿನದಂದೇ  ಭಾರತ ಇದೇ ಮೊದಲ ಬಾರಿಗೆ ಪದಕ ಗೆದ್ದುಕೊಂಡಿದೆ. ಮಹಿಳೆಯರ 49 ಕೆ.ಜಿ ವಿಭಾಗದ ವೇಟ್ ಲಿಫ್ಟಿಂಗ್  ವಿಭಾಗದಲ್ಲಿ  ಮೀರಾಬಾಯಿ ಚಾನು ಬೆಳ್ಳಿ ಜಯಿಸಿ ದಾಖಲೆ ಬರೆದಿದ್ದಾರೆ. ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ ಗೆದ್ದ ಮೊದಲ ಭಾರತೀಯ ವೇಟ್ ಲಿಫ್ಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದರೊಂದಿಗೆ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾರತದ ಪದಕ ಬೇಟೆ ಆರಂಭವಾಗಿದೆ.

ಚೀನಾದ ಝಿಹುಯಿ ಸ್ನ್ಯಾಚ್ ಹಾಗೂ  ಕ್ಲೀನ್ ಮತ್ತು ಜೆರ್ಕ್ ಎರಡರಲ್ಲೂ ಒಲಿಂಪಿಕ್ ದಾಖಲೆಯೊಂದಿಗೆ ಚಿನ್ನ ಗೆದ್ದಿದ್ದಾರೆ.ಕ್ಲೀನ್ ಹಾಗೂ ಜರ್ಕ್ ನಲ್ಲಿ ಒಟ್ಟು 110 ಕೆಜಿ ಎತ್ತಿ ಹಿಡಿದಿರುವ ಭಾರತದ ವೇಟ್ ಲಿಫ್ಟರ್ ಮೀರಾಬಾಯಿ ಚಾನು ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪದಕವನ್ನು ದೃಢಪಡಿಸಿದ್ದರು.

ಚಾನು 84 ಕೆಜಿ ಹಾಗೂ 87 ಕೆಜಿಯನ್ನು ಯಶಸ್ವಿಯಾಗಿ ಎತ್ತಿದರು. ಆದರೆ 89 ಕೆಜಿ ಭಾರ ಎತ್ತಲು ವಿಫಲರಾದರು. ಚೀನಾದ ಝಿಹುಯಿ ನಂತರ ದ್ವಿತೀಯ ಸ್ಥಾನ ಪಡೆದರು.

Join Whatsapp
Exit mobile version