ಪಟ್ನಾ: ಇಲ್ಲಿ ನಡೆದ ಸಂವಿಧಾನ ಸುರಕ್ಷಾ ಸಮ್ಮೇಳನದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಎಕ್ಸ್ ಮಾಡಿರುವ ಅವರು ಬಿಜೆಪಿಯ ದಲಿತ, ಬುಡಕಟ್ಟು ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ಸಂಸದರನ್ನು ಪಂಜರದಲ್ಲಿ ಇರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
‘ದೇಶದ ಸಂಪತ್ತು ಎರಡ್ಮೂರು ಜನರಿಗೆ ಹಂಚಿಕೆಯಾಗಬೇಕು ಎಂದು ಎಲ್ಲಿ ಬರೆದಿದೆ? ಇಂದು ಭಾರತದಲ್ಲಿ ಯಾವ ಶಾಸಕ ಹಾಗೂ ಸಂಸದನಿಗೆ ಅಧಿಕಾರವೇ ಇಲ್ಲ. ನಮ್ಮನ್ನು ಪಂಜರದಲ್ಲಿ ಇರಿಸಲಾಗಿದೆ ಎಂದು ಬಿಜೆಪಿ ಶಾಸಕ, ಸಂಸದರನ್ನು ಭೇಟಿಯಾದಾಗ ಅವರು ಹೇಳುತ್ತಾರೆ’ ಎಂದು ರಾಹುಲ್ ಹೇಳಿದ್ದಾರೆ.
‘ಗಂಗೆಯ ನೀರು ಎಲ್ಲೆಡೆಯೂ ಹರಿಯುವಂತೆ, ಸಂವಿಧಾನದ ತತ್ವ ಪ್ರತಿಯೊಬ್ಬರಿಗೂ, ದೇಶದ ಪ್ರತಿಯೊಂದು ಸಂಸ್ಥೆಗೂ ತಲುಪಬೇಕು’ ಎಂದಿದ್ದಾರೆ.