ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ (IPL) 2024ರ ಆರಂಭಿಕ ಪಂದ್ಯ ಮಾರ್ಚ್ 22ರಂದು ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆಯಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೆಣಸಲಿದೆ.
ಈ ಆವೃತ್ತಿಯ ಮೊದಲ ಪಂದ್ಯದಲ್ಲಿ ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿ ಮುಖಾಮುಖಿಯಾಗಲಿದ್ದರು. ಆದರೆ ಮಹೇಂದ್ರ ಸಿಂಗ್ ಧೋನಿ ಅವರು ಚೆನ್ನೈ ತಂಡದ ನಾಯಕತ್ವದ ಜವಾಬ್ದಾರಿಯಿಂದ ದೂರವಾಗಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಐಪಿಎಲ್ ಹ್ಯಾಂಡಲ್ ನಲ್ಲಿ ಅಧಿಕೃತವಾಗಿ ಪ್ರಕಟಿಸಲಾಗಿದೆ. ಸಿಎಸ್ ಕೆ ತಂಡದ ಮುಂದಿನ ನಾಯಕನಾಗಿ ಯುವ ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ ಅವರನ್ನು ನೇಮಿಸಲಾಗಿದೆ.
ವೈಯಕ್ತಿಕ ಕಾರಣಗಳಿಂದ ಕಳೆದ ಎರಡು ತಿಂಗಳಿಂದ ಕ್ರಿಕೆಟ್‌ನಿಂದ ದೂರ ಉಳಿದಿದ್ದ ವಿರಾಟ್ ಕೊಹ್ಲಿ, ಆರ್‌ಸಿಬಿ ಮೂಲಕ ಮತ್ತೆ ಕ್ರಿಕೆಟ್ ಆಡುತ್ತಿದ್ದಾರೆ. ಗುಜರಾತ್ ಟೈಟಾನ್ಸ್ ನಾಯಕನಾಗಿದ್ದ ಹಾರ್ದಿಕ್ ಪಾಂಡ್ಯ ಈ ಬಾರಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಲಿದ್ದಾರೆ.
ಐಪಿಎಲ್-2024 ವೇಳಾಪಟ್ಟಿ
- ಮಾರ್ಚ್ 22ರಂದು 8 ಗಂಟೆಗೆ: ಸಿಎಸ್‌ಕೆ vs ಆರ್‌ಸಿಬಿ, ಚೆನ್ನೈ
- ಮಾರ್ಚ್ 23 ರಂದು ಮಧ್ಯಾಹ್ನ 3.30 ಗಂಟೆಗೆ: ಪಂಜಾಬ್ ಕಿಂಗ್ಸ್ vs ಡೆಲ್ಲಿ ಕ್ಯಾಪಿಟಲ್ಸ್, ಮೊಹಾಲಿ
- ಮಾರ್ಚ್ 23ರಂದು ಸಂಜೆ 7.30 ಗಂಟೆಗೆ: ಕೆಕೆಆರ್ vs ಎಸ್‌ಆರ್‌ಎಚ್, ಕೋಲ್ಕತ್ತಾ
- ಮಾರ್ಚ್ 24ರಂದು ಸಂಜೆ 7.30 ಗಂಟೆಗೆ: ಆರ್‌ಆರ್ vs ಎಲ್‌ಎಸ್‌ಜಿ, ಜೈಪುರ
- ಮಾರ್ಚ್ 24ರಂದು ಸಂಜೆ 7.30 ಗಂಟೆಗೆ: ಜಿಟಿ vs ಎಂಐ, ಅಹಮದಾಬಾದ್
- ಮಾರ್ಚ್ 25ರಂದು ಸಂಜೆ 7.30 ಗಂಟೆಗೆ: ಆರ್‌ಸಿಬಿ vs ಪಂಜಾಬ್ ಕಿಂಗ್ಸ್, ಬೆಂಗಳೂರು
- ಮಾರ್ಚ್ 26ರಂದು ಸಂಜೆ 7.30 ಗಂಟೆಗೆ: ಸಿಎಸ್‌ಕೆ vs ಜಿಟಿ, ಚೆನ್ನೈ
- ಮಾರ್ಚ್ 27ರಂದು ಸಂಜೆ 7.30 ಗಂಟೆಗೆ: ಎಸ್‌ಆರ್‌ಎಚ್ vs ಎಂಐ, ಹೈದರಾಬಾದ್
- ಮಾರ್ಚ್ 28ರಂದು ಸಂಜೆ 7.30ಕ್ಕೆ: ಆರ್‌ಆರ್ vs ಡಿಸಿ, ಜೈಪುರ
- ಮಾರ್ಚ್ 29ರಂದು ಸಂಜೆ 7.30ಕ್ಕೆ: ಆರ್‌ಸಿಬಿ vs ಕೆಕೆಆರ್, ಬೆಂಗಳೂರು
- ಮಾರ್ಚ್ 30ರಂದು ಸಂಜೆ 7.30ಕ್ಕೆ: ಎಲ್‌ಎಸ್‌ಜಿ vs ಪಿಬಿಕೆಎಸ್, ಲಖನೌ
- ಮಾರ್ಚ್ 31ರಂದು ಸಂಜೆ 3.30ಕ್ಕೆ: ಜಿಟಿ vs ಎಸ್‌ಆರ್‌ಎಚ್, ಅಹಮದಾಬಾದ್
- ಮಾರ್ಚ್ 31ರಂದು ಸಂಜೆ 7.30ಕ್ಕೆ: ಡಿಸಿ vs ಸಿಎಸ್‌ಕೆ, ವೈಜಾಗ್
- ಏಪ್ರಿಲ್ 1ರಂದು ಸಂಜೆ 7.30ಕ್ಕೆ: ಎಂಐ vs ಆರ್‌ಆರ್, ಮುಂಬೈ
- ಏಪ್ರಿಲ್ 2ರಂದು ಸಂಜೆ 7.30ಕ್ಕೆ: ಆರ್‌ಸಿಬಿ vs ಎಲ್‌ಎಸ್‌ಜಿ, ಬೆಂಗಳೂರು
- ಏಪ್ರಿಲ್ 3ರಂದು ಸಂಜೆ 7.30ಕ್ಕೆ: ಡಿಸಿ vs ಕೆಕೆಆರ್, ವೈಜಾಗ್
- ಏಪ್ರಿಲ್ 4ರಂದು ಸಂಜೆ 7.30ಕ್ಕೆ: ಜಿಟಿ vs ಪಿಬಿಕೆಎಸ್, ಅಹಮದಾಬಾದ್
- ಏಪ್ರಿಲ್ 5ರಂದು ಸಂಜೆ 7.30ಕ್ಕೆ: ಎಸ್‌ಆರ್‌ಎಚ್ vs ಸಿಎಸ್‌ಕೆ, ಹೈದರಾಬಾದ್
- ಏಪ್ರಿಲ್ 6ರಂದು ಸಂಜೆ 7.30ಕ್ಕೆ: ಆರ್‌ಆರ್ vs ಆರ್‌ಸಿಬಿ, ಜೈಪುರ
- ಏಪ್ರಿಲ್ 7ರಂದು ಸಂಜೆ 7.30ಕ್ಕೆ: ಎಂಐ vs ಡಿಸಿ, ಮುಂಬೈ
- ಏಪ್ರಿಲ್ 7ರಂದು ಸಂಜೆ 7.30ಕ್ಕೆ: ಎಲ್‌ಎಸ್‌ಜಿ vs ಜಿಟಿ, ಲಖನೌ IPL-2024 ತಂಡಗಳ ನಾಯಕರು:
- ಚೆನ್ನೈ ಸೂಪರ್ ಕಿಂಗ್ಸ್: ರುತುರಾಜ್ ಗಾಯಕ್ವಾಡ್
- ಡೆಲ್ಲಿ ಕ್ಯಾಪಿಟಲ್ಸ್: ರಿಷಬ್ ಪಂತ್
- ಗುಜರಾತ್ ಟೈಟಾನ್ಸ್: ಶುಭಮನ್ ಗಿಲ್
- ಕೋಲ್ಕತ್ತಾ ನೈಟ್ ರೈಡರ್ಸ್: ಶ್ರೇಯಸ್ ಐಯ್ಯರ್
- ಲಖನೌ ಸೂಪರ್ ಜೈಂಟ್ಸ್: ಕೆಎಲ್ ರಾಹುಲ್
- ಮುಂಬೈ ಇಂಡಿಯನ್ಸ್: ಹಾರ್ದಿಕ್ ಪಾಂಡ್ಯ
- ಪಂಜಾಬ್ ಕಿಂಗ್ಸ್: ಶಿಖರ್ ಧವನ್
- ರಾಜಸ್ತಾನ್ ರಾಯಲ್ಸ್: ಸಂಜು ಸ್ಯಾಮ್ಸನ್
- ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಾಫ್ ಡು ಪ್ಲೆಸಿಸ್
- ಸನ್‌ರೈಸರ್ಸ್ ಹೈದರಾಬಾದ್: ಪ್ಯಾಟ್ ಕಮಿನ್ಸ್