ನವದೆಹಲಿ: ಗಣರಾಜ್ಯೋತ್ಸವ ಕಾರ್ಯಕ್ರಮಗಳ ಸಮಾರೋಪದ ಅಂಗವಾಗಿ ವಿಜಯ್ ಚೌಕ್ನಲ್ಲಿ ಇಂದು ‘ಬೀಟಿಂಗ್ ರೀಟ್ರೀಟ್’ ಕಾರ್ಯಕ್ರಮ ನಡೆಯಲಿದೆ.
ಸೇನಾಪಡೆ ಮತ್ತು ಅರೆಸೇನಾಪಡೆಯ ಬ್ಯಾಂಡ್ಗಳು ನುಡಿಸುವ ಭಾರತೀಯ ಗೀತೆಗಳಿಗೆ ರೈಸಿನಾ ಹಿಲ್ಸ್ ಸಾಕ್ಷಿಯಾಗಲಿದೆ.
ಭೂಸೇನೆ, ನೌಕಾಪಡೆ, ವಾಯುಪಡೆ ಮತ್ತು ಸಿಆರ್ಪಿಎಫ್ನ ಬ್ಯಾಂಡ್ಗಳು 31 ಭಾರತೀಯ ಗೀತೆಗಳನ್ನು ನುಡಿಸಲಿವೆ.
ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪ ರಾಷ್ಟ್ರಪತಿ ಜಗದೀಪ್ ಧನಕರ್, ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಸಚಿವರು ಮತ್ತು ಅಧಿಕಾರಿಗಳು ಕಾರ್ಯಕ್ರಮವನ್ನು ವೀಕ್ಷಿಸಲಿದ್ದಾರೆ.