Home ಟಾಪ್ ಸುದ್ದಿಗಳು ರಾಜಕಾರಣದ ಮೇಲೆ ಧರ್ಮದ ಪ್ರಭಾವ ಹೆಚ್ಚುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾರಕ: ವೀರಪ್ಪ ಮೊಯ್ಲಿ

ರಾಜಕಾರಣದ ಮೇಲೆ ಧರ್ಮದ ಪ್ರಭಾವ ಹೆಚ್ಚುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾರಕ: ವೀರಪ್ಪ ಮೊಯ್ಲಿ

ಚಿಕ್ಕಬಳ್ಳಾಪುರ: ವಿಶ್ವದ ಇತರ ಎಲ್ಲಾ ರಾಷ್ಟ್ರಗಳಲ್ಲಿಯೂ ರಾಜಕಾರಣದ ಮೇಲೆ ಧರ್ಮ ಪ್ರಭಾವ ಬೀರುವುದು ಕಡಿಮೆ ಆಗುತ್ತಿದೆ. ಆದರೆ ಭಾರತ ದೇಶದಲ್ಲಿ ದುರದೃಷ್ಟಾವಶಾತ್ ರಾಜಕಾರಣದ ಮೇಲೆ ಧರ್ಮದ ಪ್ರಭಾವ ಹೆಚ್ಚುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ ಎಂದು ಮಾಜಿ ಸಿಎಂ ಡಾ.ಎಂ. ವೀರಪ್ಪ ಮೊಯ್ಲಿ ಹೇಳಿದ್ದಾರೆ.

ನಗರದ ಗುರುರಾಜ ಕಲ್ಯಾಣ ಮಂಟಪದಲ್ಲಿ ಯಲುವಹಳ್ಳಿ.ಎನ್.ರಮೇಶ್ ಅಭಿಮಾನಿಗಳು ಹಾಗೂ ಸಮಾನ ಮನಸ್ಕರ ಸೇವಾ ಸಮಿತಿ ವತಿಯಿಂದ ಏರ್ಪಡಿಸಿದ್ದ ಸಾಮೂಹಿಕ ಸೀಮಂತ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ರಾಜ್ಯದಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕ ಸ್ಥಾನಗಳನ್ನು ಗಳಿಸುತ್ತದೆ. ಆದರೆ ಇಷ್ಟೇ ಸ್ಥಾನ ಗಳಿಸುತ್ತದೆ ಎಂದು ಭವಿಷ್ಯ ಖಚಿತವಾಗಿ ಹೇಳುವುದಕ್ಕೆ ಆಗಲ್ಲ ಎಂದರು.

ರಾಜ್ಯದಲ್ಲಿ ಬಿಜೆಪಿ ಮತ್ತು ಜಾತ್ಯತೀತ ಜನತಾದಳ ಪಕ್ಷ ಚುನಾವಣಾ ರಾಜಕೀಯ ಹೊಂದಾಣಿಕೆ ಮಾಡಿಕೊಂಡಿರುವ ಬಗ್ಗೆ ವಿಶ್ಲೇಷಿಸಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅಧಿಕಾರಕ್ಕಾಗಿ ಯಾರ ಬಳಿಗಾದರೂ ಹೋಗುತ್ತಾರೆ ಯಾರಿಗಾದರೂ ನಮಸ್ಕರಿಸುತ್ತಾರೆ ಅವರನ್ನು ಒಪ್ಪಿಕೊಂಡವರು ಗುಂಡಿಗೆ ಬೀಳುವುದಂತು ಖಚಿತ ಎಂದರು.

ನಾನು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಎರಡು ಬಾರಿ ಪ್ರತಿನಿಧಿಸಿ ಕೇಂದ್ರದಲ್ಲಿ ಹಲವು ಖಾತೆಗಳನ್ನು ನಿಭಾಯಿಸಿದ್ದೇನೆ. ಮುಂಬರುವ 2024ರ ಚುನಾವಣೆಯಲ್ಲಿ ನನಗೆ ಟಿಕೆಟ್ ದೊರೆತರೆ ಈ ಕ್ಷೇತ್ರದ ಜನತೆ ನಾನು ಹಿಂದೆ ಮಾಡಿರುವ ಜನಪರ ಯೋಜನೆಗಳ ಕಾರಣದಿಂದ ನನ್ನನ್ನು ಬೆಂಬಲಿಸುವರು ಎಂಬ ನಿರೀಕ್ಷೆ ನನಗೆ ಇದೆ ಎಂದರು.

Join Whatsapp
Exit mobile version