ಕೊಡಗು: ಕೋವಿಡ್ ಬಿಕ್ಕಟಿನಿಂದ ಬಂದ್ ಆಗಿದ್ದ ಕುಶಾಲನಗರದ ಬೈಲುಕುಪ್ಪೆಯಲ್ಲಿರುವ ಟಿಬೆಟಿಯನ್ ಧರ್ಮಶಾಲಾ ಮೊನಾಸರಿ ಎರಡು ವರ್ಷಗಳ ನಂತರ ಮತ್ತೆ ಪ್ರವಾಸಿಗರಿಗೆ ಮುಕ್ತವಾಗಿದೆ. ಸದ್ಯ ಟಿಬೆಟಿಯನ್ ಕ್ಯಾಂಪ್ ಮತ್ತೆ ಓಪನ್ ಆಗಿದ್ದು, ನಿಧಾನವಾಗಿ ಪ್ರವಾಸಿಗರ ದಂಡು ಕ್ಯಾಂಪ್ ವೀಕ್ಷಣೆಗೆ ಬರುತ್ತಿದೆ. ಬುದ್ಧನಿಗೆ ಪ್ರಾರ್ಥನೆ ಸಲ್ಲಿಸಿ, ಇಲ್ಲಿನ ಪ್ರಕೃತಿ ಸೌಂದರ್ಯ ನೋಡಿ ಮೈಮರೆಯುತ್ತಿದ್ದಾರೆ. ಕೋವಿಡ್ ಸೋಂಕು ಹರಡಿ ಭೀತಿಯಿಂದ ಟಿಬೆಟಿಯನ್ ಧರ್ಮ ಗುರುಗಳು ಧರ್ಮಶಾಲಾ ಮೊನಾಸರಿಯನ್ನು ಸಂಪೂರ್ಣ ಬಂದ್ ಮಾಡಿದ್ದರು. ಮೊನಾಸರಿಯಲ್ಲಿ ಇಂದಿಗೂ ಸುಮಾರು 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಕರು ಪಡೆಯುತ್ತಿದ್ದಾರೆ. ಹೊರಗಿನಿಂದ ಬರುವ ಎಲ್ಲಾ ಪ್ರವಾಸಿಗರಿಗೂ ಮೊನಾಸರಿಯ ಒಳಗೆ ಹೋಗಿ ಬರಲು ಮುಕ್ತ ಅವಕಾಶ ನೀಡಿದ್ದಾರೆ.