Home ಕರಾವಳಿ ಉಕ್ರೇನ್’ನಿಂದ ನಾಲ್ವರು ವೈದ್ಯಕೀಯ ವಿದ್ಯಾರ್ಥಿಗಳು ಮಂಗಳೂರಿಗೆ ವಾಪಸ್

ಉಕ್ರೇನ್’ನಿಂದ ನಾಲ್ವರು ವೈದ್ಯಕೀಯ ವಿದ್ಯಾರ್ಥಿಗಳು ಮಂಗಳೂರಿಗೆ ವಾಪಸ್

ಮಂಗಳೂರು: ಉಕ್ರೇನ್ ನಲ್ಲಿ ವೈದ್ಯಕೀಯ ವಿದ್ಯಾಭ್ಯಾಸ ಮಾಡುತ್ತಿದ್ದ ಮಂಗಳೂರು ಮೂಲದ ನಾಲ್ವರು ವಿದ್ಯಾರ್ಥಿಗಳು ಇಂದು ತಾಯ್ನಾಡಿಗೆ ವಾಪಸ್ ಆಗಿದ್ದಾರೆ.
ಪಡೀಲ್ ಮೂಲದ ಕ್ಲೇಟನ್, ಮತ್ತು ದೇರೆಬೈಲ್ ನ ಅನೈನಾ ,ಶಾಲ್ವಿನ್ ಪ್ರೀತಿ ಅರನ್ನ, ಶಾದ್ ಅರ್ಷಾದ್ ಅಹ್ಮದ್ ತಾಯ್ನಾಡಿಗೆ ಸೋಮವಾರ ಮರಳಿದ್ದಾರೆ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ವಿದ್ಯಾರ್ಥಿಗಳನ್ನು ಜಿಲ್ಲಾಡಳಿತ, ಹೆತ್ತವರು, ಸಂಬಂಧಿಕರು ಬರಮಾಡಿಕೊಂಡರು.
ಈ ವಿದ್ಯಾರ್ಥಿಗಳು ಇತ್ತೀಚೆಗಷ್ಟೇ ಉಕ್ರೇನ್’ಗೆ ವೈದ್ಯಕೀಯ ವಿದ್ಯಾಭ್ಯಾಸಕ್ಕಾಗಿ ತೆರಳಿದ್ದರು.

Join Whatsapp
Exit mobile version