Home ಟಾಪ್ ಸುದ್ದಿಗಳು ರಾಜ್ಯಗಳಿಗೂ ವಿಸ್ತರಿಸಿದ ರೈತರ ಪ್ರತಿಭಟನೆ | ಬಿಹಾರ ರಾಜ್ಯಪಾಲರ ನಿವಾಸಕ್ಕೆ ಸಾವಿರಾರು ರೈತರಿಂದ ಮುತ್ತಿಗೆಗೆ ಯತ್ನ

ರಾಜ್ಯಗಳಿಗೂ ವಿಸ್ತರಿಸಿದ ರೈತರ ಪ್ರತಿಭಟನೆ | ಬಿಹಾರ ರಾಜ್ಯಪಾಲರ ನಿವಾಸಕ್ಕೆ ಸಾವಿರಾರು ರೈತರಿಂದ ಮುತ್ತಿಗೆಗೆ ಯತ್ನ

ಪಾಟ್ನಾ : ಪ್ರಧಾನಿ ನರೇಂದ್ರ ಮೋದಿ ಸರಕಾರದ ನೂತನ ಕೃಷಿ ಕಾನೂನಿನ ವಿರುದ್ಧ ಕೊರೆವ ಚಳಿಯಲ್ಲೂ ಒಂದು ತಿಂಗಳಿನಿಂದ ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ನಿರತರಾಗಿರುವ ರೈತರ ಪ್ರತಿಭಟನೆ ಈಗ ರಾಜ್ಯಗಳಿಗೆ ವಿಸ್ತಾರವಾಗಿದೆ. ಬಿಹಾರದ ಪಾಟ್ನಾದಲ್ಲಿ ಇಂದು ರಾಜಭವನಕ್ಕೆ ಸಾವಿರಾರು ರೈತರು ಮುತ್ತಿಗೆ ಹಾಕಲು ಯತ್ನಿಸಿದ್ದು, ನೂತನ ಕಾನೂನು ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ.

ಗಾಂಧಿ ಮೈದಾನದಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಗಿತ್ತು. ಡಾಕ್ ಬಂಗ್ಲೆ ಚೌಕ್ ಬಳಿ ಪೊಲೀಸರು ಪ್ರತಿಭಟನಕಾರರನ್ನು ತಡೆದಿದ್ದಾರೆ. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಕಾರರ ನಡುವೆ ಮಾತಿನ ಚಕಮಕಿ ನಡೆದಿದ್ದು, ತಳ್ಳಾಟ ನಡೆದಿದೆ.  

Join Whatsapp
Exit mobile version