Home ಟಾಪ್ ಸುದ್ದಿಗಳು ರಾಜಕೀಯ ಪಕ್ಷ ಸ್ಥಾಪನೆಯಿಂದ ಹಿಂದೆ ಸರಿಯಲು ನಿರ್ಧರಿಸಿದ ರಜನೀಕಾಂತ್

ರಾಜಕೀಯ ಪಕ್ಷ ಸ್ಥಾಪನೆಯಿಂದ ಹಿಂದೆ ಸರಿಯಲು ನಿರ್ಧರಿಸಿದ ರಜನೀಕಾಂತ್

ನವದೆಹಲಿ : ತಮಿಳುನಾಡಿನ ಸೂಪರ್ ಸ್ಟಾರ್ ರಜನೀಕಾಂತ್ ಕೊನೆಗೂ ರಾಜಕೀಯ ಪಕ್ಷ ಸ್ಥಾಪಿಸುವ ಯೋಜನೆಯನ್ನು ಕೈಬಿಟ್ಟಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ, ತಾನು ರಾಜಕೀಯ ಪಕ್ಷ ಸ್ಥಾಪಿಸುವ ಕಾರ್ಯದಲ್ಲಿ ಮುಂದುವರಿಯುವುದಿಲ್ಲ ಎಂಬ ಸೂಚನೆ ನೀಡಿದ್ದಾರೆ.

“ನಾನು ರಾಜಕೀಯಕ್ಕೆ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ನಾನು ಅತ್ಯಂತ ಬೇಸರದಿಂದ ಹೇಳುತ್ತಿದ್ದೇನೆ. ಈ ನಿರ್ಧಾರ ಪ್ರಕಟಿಸುವಾಗ ಆಗುವ ನೋವು ಏನೆಂಬುದನ್ನು ನಾನೊಬ್ಬನೇ ಅರಿಯಬಲ್ಲೆ” ಎಂದು ಅವರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ರಕ್ತದೊತ್ತಡದ ಕಾರಣ ಎರಡು ದಿನಗಳ ವರೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಗೊಂಡ ಬಳಿಕ, ಅವರು ತಮ್ಮ ಈ ನಿರ್ಧಾರ ಪ್ರಕಟಿಸಿದ್ದಾರೆ.

ರಾಜಕೀಯ ಪ್ರವೇಶಿಸದೆ ನಾನು ಜನರ ಸೇವೆ ಮಾಡುತ್ತೇನೆ. ನನ್ನ ಈ ನಿರ್ಧಾರ ಅಭಿಮಾನಿಗಳಲ್ಲಿ ನಿರಾಸೆಯನ್ನುಂಟು ಮಾಡಬಲ್ಲದು, ಆದರೆ ದಯವಿಟ್ಟು ನನ್ನನ್ನು ಕ್ಷಮಿಸಿ. ನಾನು ಆಸ್ಪತ್ರೆಗೆ ದಾಖಲಾಗಿರುವುದು ದೇವರು ನನಗೆ ನೀಡಿದ ಮುನ್ಸೂಚನೆ. ನನ್ನ ಪ್ರಚಾರದಿಂದ ಆರೋಗ್ಯದ ಮೇಲೆ ಪರಿಣಾಮ ಬೀರಬಲ್ಲದು” ಎಂದು ರಜನೀಕಾಂತ್ ಹೇಳಿದ್ದಾರೆ.

ಸುಮಾರು 25 ವರ್ಷಗಳಿಂದ ರಜನೀಕಾಂತ್ ರಾಜಕೀಯ ಪ್ರವೇಶದ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇವೆ. ಈ ತಿಂಗಳ ಆರಂಭದಲ್ಲಿ ಅವರು ರಾಜಕೀಯ ಪ್ರವೇಶಿಸುವುದನ್ನು ದೃಢಪಡಿಸಲಾಗಿತ್ತು. ಆದರೆ, ಇದೀಗ ಮುಂದೆಂದೂ ರಾಜಕೀಯ ಪ್ರವೇಶಿಸದಿರುವ ಬಗ್ಗೆ ಅವರು ನಿರ್ಧಾರ ಪ್ರಕಟಿಸಿದ್ದಾರೆ.

Join Whatsapp
Exit mobile version