ಕೊಪ್ಪಳ: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆ ವಿರೋಧಿಸಿದವರೇ, ಇಂದು ಬೇರೆ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಜನರಿಗೆ ಗ್ಯಾರಂಟಿ ನೀಡಲು ಮುಂದಾಗಿರುವುದು ವಿಪರ್ಯಾಸ ಎಂದು ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ”ಬಿಜೆಪಿಯವರು ನುಡಿದಂತೆ ನಡೆಯದವರು. ನಾವು ಯಾವುದೇ ಯೋಜನೆ ಮಾಡಿದರೆ ರಾಜ್ಯ, ದೇಶ ದಿವಾಳಿಯಾಗುತ್ತದೆ. ಅದೇ ಬಿಜೆಪಿಯವರು ಮಾಡಿದರೆ, ಅದು ಹೇಗೆ ಉದ್ಧಾರ ಮಾಡುವ ಕೆಲಸವಾಗುತ್ತದೆ” ಎಂದು ಪ್ರಶ್ನಿಸಿದರು.