ಬೆಂಗಳೂರು: ಬಿಜೆಪಿ ಸರ್ಕಾರ ಕೂಡಾ ಹಿಂದಿನ ಸರ್ಕಾರಗಳು ಮಾಡಿದ ಯೋಜನೆ ಮುಂದುವರೆಸಿದೆ. ಈ ಗ್ಯಾರಂಟಿ ಯೋಜನೆಗಳು ಕೂಡಾ ಹಾಗೆ ಯಥಾಸ್ಥಿತಿಯಲ್ಲಿ ಮುಂದುವರೆದುಕೊಂಡು ಹೋಗುತ್ತದೆ ಎಂದು ಮಾಜಿ ಶಾಸಕ ಶ್ರೀರಾಮುಲು ಹೇಳಿದ್ದಾರೆ.
ಬಿಜೆಪಿ ಅಧಿಕಾರಕ್ಕೆ ಬಂದ್ರೆ ಗ್ಯಾರಂಟಿ ಯೋಜನೆ ನಿಲ್ಲುತ್ತದೆ ಎಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಕೊಟ್ಟಿರೋ ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಶಕ್ತಿ ಗ್ಯಾರಂಟಿ ಯೋಜನೆಗಳು ಜನರಿಗೆ ತೃಪ್ತಿ ಆಗಿದ್ದರೆ, ಜನರೇ ಅರ್ಥ ಮಾಡಿಕೊಂಡು ಸಪೋರ್ಟ್ ಮಾಡ್ತಾರೆ. ಯೋಜನೆಗಳು ಸರಿಯಾಗಿ ಸಿಗದೇ ಹೋದರೆ ಜನ ವಿರೋಧ ಮಾಡೇ ಮಾಡ್ತಾರೆ. ಆದರೆ ಜಾರಿಗೆ ಬಂದ ಕಾರ್ಯಕ್ರಮಗಳನ್ನ ಎಲ್ಲಾ ಸರ್ಕಾರಗಳು ಉಳಿಸಿಕೊಂಡು ಬರುತ್ತಿವೆ. ಬಿಜೆಪಿ ಸರ್ಕಾರ ಕೂಡಾ ಹಿಂದಿನ ಸರ್ಕಾರಗಳು ಮಾಡಿದ ಯೋಜನೆ ಮುಂದುವರೆಸಿದೆ. ಈ ಗ್ಯಾರಂಟಿ ಯೋಜನೆಗಳು ಕೂಡಾ ಹಾಗೆ ಯಥಾಸ್ಥಿತಿಯಲ್ಲಿ ಮುಂದುವರೆದುಕೊಂಡು ಹೋಗುತ್ತದೆ ಎಂದು ಹೇಳಿದ್ದಾರೆ.